ನವದೆಹಲಿ : ಚಲನಚಿತ್ರ ನಟಿ ಮತ್ತು ಕೇಂದ್ರ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಖುಷ್ಬೂ ಅವರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದು, ಟೈಲ್ ಬೋನ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿರೋದಾಗಿ ಹೇಳಿದ್ದಾರೆ. “ನನ್ನ ಕೋಕ್ಸಿಕ್ಸ್ ಮೂಳೆ ಚಿಕಿತ್ಸೆ ಪುನಃ ಶುರುವಾಗಿದೆ. ನಾನು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇನೆ. ಅದಷ್ಟು ಬೇಗ ಸಂಪೂರ್ಣವಾಗಿ ಗುಣಮುಖವಾಗಲಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ಶೀಘ್ರ ಗುಣಮುಖರಾಗುವಂತೆ ಕಾಮೆಂಟ್ ಮಾಡುತ್ತಿದ್ದಾರೆ.