ಬೆಂಗಳೂರು: ತರಾಸು ಎಂದೇ ಜನಪ್ರಿಯರಾದ ಕನ್ನಡದ ಖ್ಯಾತ ಕಾದಂಬರಿಕಾರ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಅವರ ಪುಣ್ಯಸ್ಮರಣೆ
ಸಾಹಿಯದಲ್ಲಿ ಬರೆದಂತೆ ಬದುಕಿದವರು ವಿರಳ. ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ಎರಡೂ ರೀತಿಯ ವಿರಳ ವ್ಯಕ್ತಿಗಳ ಸಾಲಿಗೆ ಸೇರಿದವರು ತರಾಸು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ, ಚಿತ್ರರಂಗಕ್ಕೂ ದೊಡ್ಡ ಕೊಂಡಿಯಂತಿದ್ದ ಅವರ 10ಕ್ಕೂ ಹೆಚ್ಚು ಕೃತಿಗಳು ಸಿನಿಮಾವಾಗಿದೆ. ಅದರಲ್ಲೂ ಸಂಚಲನ ಸೃಷ್ಟಿಸಿದ್ದ ಸಿನಿಮಾ ‘ನಾಗರಹಾವು’ ಇವರ ಕಾದಂಬರಿ ಆಧಾರಿತ ಸಿನಿಮಾ ಎನ್ನುವುದು ವಿಶೇಷ.!