ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಧೀಶರ ಮುಂದೆ ಜೈಲು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ಕಳೆದ 13 ದಿನಗಳಿಂದ ಪವಿತ್ರಾ ಮತ್ತು ದರ್ಶನ್ ಒಂದೇ ಜೈಲಿನಲ್ಲಿದ್ದರೂ ದರ್ಶನ್ ಪವಿತ್ರಾಳನ್ನ ಭೇಟಿ ಮಾಡಿಲ್ಲ. ಹೀಗಾಗಿ ಇಂದು ವಿಡಿಯೋ ಕಾನ್ಫರೆನ್ಸ್ ವೇಳೆ ಇಬ್ಬರು ಭೇಟಿಯಾಗೋ ಸಾಧ್ಯತೆಯಿದೆ. ಇದೇ ಕಾರಣಕ್ಕೆ ದರ್ಶನ್ ಕುಟುಂಬಸ್ಥರು ಇಬ್ಬರನ್ನು ಬೇರೆ ಬೇರೆಯಾಗಿ ನ್ಯಾಯಧೀಶರ ಮುಂದೆ ಹಾಜರುಪಡಿಸಿ ಅಂತ ಮನವಿ ಮಾಡಿದ್ದಾರಂತೆ. ಇದಕ್ಕೆ ಕೋರ್ಟ್ ಮತ್ತು ಜೈಲಿನ ಮ್ಯಾನ್ಯೂಲ್ ಒಪ್ಪುತ್ತಾ ಅನ್ನೊದು ಗೊತ್ತಿಲ್ಲ. ಇನ್ನು ಪೊಲೀಸರು ಚಾರ್ಚ್ ಸಲ್ಲಿಸಿದ ಬಳಿಕ. ಜಾಮೀನು ಅರ್ಜಿಗೆ ಮನವಿ ಸಲ್ಲಿಸಲು ದರ್ಶನ್ ಪರ ವಕೀಲರು ಚಿಂತನೆ ನಡೆಸಿದ್ದಾರೆ.
