ಬೆಂಗಳೂರು: ಏಪ್ರಿಲ್ 19ರಂದು ದೇಶದ ಮೊದಲ ಹಂತದ ಮತದಾನ ನಡೆದಿದ್ದು, ಇದೀಗ ಎರಡನೇ (ರಾಜ್ಯದ ಮೊದಲ ಹಂತದ ಚುನಾವಣೆ) ಹಂತದ ಮತದಾನಕ್ಕೆ ಒಂದೇ ದಿನ ಬಾಕಿ ಇದೆ. ನಾಳೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರೆ, ಪೋಲಿಂಗ್ ಅಧಿಕಾರಿಗಳು ಇವಿಎಂ ಯಂತ್ರಗಳು ಹದಿನಾಲ್ಕು ಮತಕ್ಷೇತ್ರಗಳಿಗೆ ಈಗಾಗಲೇ ರವಾನೆಯಾಗಿವೆ. ಇದಕ್ಕಾಗಿ ಬಿಎಂಟಿಸಿಯ ಒಂದು ಸಾವಿರ ಬಸ್ ಗಳು ಸೇರಿದಂತೆ ಕೆಎಸ್ ಆರ್ ಟಿಸಿಯ ಎರಡು ಸಾವಿರ ಬಸ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ರಾಜ್ಯದ ಮೂವತ್ತು ಸಾವಿರದಷ್ಟಿರುವ ಮತಗಟ್ಟೆಗಳ ಸುತ್ತಮುತ್ತ ಬಿಗಿ ಬದ್ರತೆಯನ್ನು ಕೈಗೊಳ್ಳಲಾಗಿದ್ದು, ಐವತ್ತು ಸಾವಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ 65 ಪ್ಯಾರಾ ಮಿಲಿಟರಿ ಪಡೆ, ಸಿಎಆರ್ ಪೊಲೀಸ್ ತುಕಡಿಗಳನ್ನು ಚುನಾವಣಾ ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಬಿಸಿಲಿನ ತಾಪದಿಂದ ರಕ್ಷಣೆಗಾಗಿ ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಕಲಾಂಗ ಚೇತನರು ಮತ್ತು ವಯಸ್ಸಾದ ಮತದಾರರನ್ನು ಮತಗಟಗಟೆಗಳಿಗೆ ಕರೆತರಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಸನ್ ಸ್ಟ್ರೋಕ್ ನಿಂದ ತೊಂದರೆ ಸೇರಿ ಮತ್ತಿತರ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಂಡು ಬಂದರೆ ಅಂಥವರಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಜಾಗ ಖಾಲಿ ಮಾಡಬೇಕು: ಮತದಾನಕ್ಕೆ ನಲವತ್ತೆಂಟು ಗಂಟೆಗಳಿಗೂ ಮುಂಚೆಯೇ ಮತಕ್ಷೇತ್ರಗಳಿಗೆ ಸಂಬಂಧಪಡದವರು ಆಯಾ ಮತಕ್ಷೇತ್ರಗಳನ್ನು ಖಾಲಿ ಮಾಡಬೇಕು. 144 ಸೆಕ್ಷನ್ ಜಾರಿ, ಮದ್ಯ ಮಾರಾಟ ಬಂದ್: ಬಹಿರಂಗ ಪ್ರಚಾರಕ್ಕೆ ನಿನ್ನೆಯೇ ತೆರೆ ಬಿದ್ದಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಹದಿನಾಲ್ಕು ಮತಕ್ಷೇತ್ರಗಳಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ನಿಷೇಧಾಜ್ಞೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರ ನಡೆಸಲು ಹತ್ತು ಜನರಿಗಿಂತ ಹೆಚ್ಚು ಜನರು ಇರುವಂತಿಲ್ಲ. ಅಭ್ಯರ್ಥಿಯೂ ಸೇರಿದಂತೆ ಮೂರು ವಾಹನಗಳುಗಿಂತ ಹೆಚ್ಚು ವಾಹನಗಳನ್ನು ಬಳಸುವಂತಿಲ್ಲ. ವಾಹನದಲ್ಲಿ ಚಾಲಕರೂ ಸೇರಿ ಮೂವರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ. ಇನ್ನು ನಿನ್ನೆ ಸಾಯಂಕಾಲ ಆರು ಗಂಟೆಯಿಂದಲೇ ಚುನಾವಣೆ ನಡೆಯಲಿರುವ ಹದಿನಾಲ್ಕು ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸರಬರಾಜನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಏ.24ರ ಸಂಜೆ ಆರರಿಂದ ಏ.26ರ ಮಧ್ಯ ರಾತ್ರಿ 12ರ ವರೆಗೆ ಮದ್ಯ ಮಾರಾಟ, ತಯಾರಿ, ಸರಬರಾಜನ್ನು ನಿಷೇಧಿಸಲಾಗಿದೆ. ಶಾಲಾ-ಕಾಲೇಜು, ಬ್ಯಾಂಕ್ ಗಳಿಗೆ ರಜೆ: ನಾಳೆ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮತದಾನ ನಡೆಯಲಿದ್ದು, ಬಸ್ಸು, ರೈಲು ಸೇರಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಶಾಲಾ ಕಾಲೇಜು, ಬ್ಯಾಂಕ್, ವಾಣಿಜ್ಯ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಮತದಾನಕ್ಕೆ ಅಗತ್ಯ ಅನುವು ಮಾಡಿಕೊಡಬೇಕಿದೆ. ಐಟಿ ಉದ್ದಿಮೆಗಳವರು ಮತದಾನದ ದಿನ ರಜೆ ನೀಡಬೇಕೆಂದು ಈಗಾಗಲೇ ಸೂಚಿಸಲಾಗಿದೆ. ಯಾವ ಕ್ಷೇತ್ರಗಳಿಗೆ ಮತದಾನ? ಬೆಂಗಳೂರು ಕೇಂದ್ರ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ಉಡುಪಿ-ಚಿಕ್ಕಮಗಳೂರು ತುಮಕೂರು ಚಾಮರಾಜನಗರ ಮೈಸೂರು ಮಂಡ್ಯ ಹಾಸನ ದಕ್ಷಿಣ ಕನ್ನಡ ಚಿತ್ರದುರ್ಗ ಹದಿನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ 14, ಬಿಜೆಪಿಯ 11, ಜೆಡಿಎಸ್ ನಿಂದ 3 ಅಭ್ಯರ್ಥಿಗಳು ಸೇರಿದಂತೆ ಒಟ್ಟು 247 ಮಂದಿ ಹುರಿಯಾಳುಗಳು ಸ್ಪರ್ಧಾ ಕಣದಲ್ಲಿದ್ದಾರೆ. ಈ ಪೈಕಿ 226 ಮಂದಿ ಪುರುಷ, 21 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಇನ್ನು ಏ.19 ರಂದು ಇಪ್ಪತ್ತೊಂದು ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು. ನಾಳೆ ಕರ್ನಾಟಕವೂ ಸೇರಿದಂತೆ ಇತರ ಹದಿಮೂರು ರಾಜ್ಯಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ.
ಇಂದು ಮನೆ ಮನೆ ಪ್ರಚಾರ, ಮತದಾನಕ್ಕೆ ಒಂದೇ ದಿನ ಬಾಕಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
Shocking News: 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ!!
12 January 2025
ಐಎಎಸ್ ಅಧಿಕಾರಿ ಮನೀಶ್ ವರ್ಮಾ ಯಶಸ್ಸಿನ ಕಥನ
12 January 2025
18 ರಂದು ಸಿಎಂ ವಾಣಿವಿಲಾಸ ಸಾಗರಕ್ಕೆ ಬಾಗಿನ: ಸಚಿವ ಡಿ.ಸುದಾಕರ್
12 January 2025
ನಿರಂತರ ಅಭ್ಯಾಸದ ಮೂಲಕ ಸ್ವರದಲ್ಲಿ ಮಾಂತ್ರಿಕತೆ: ಕೆ.ಎಸ್.ನವೀನ್
12 January 2025
ವಚನ.: -ಅಲ್ಲಮಪ್ರಭುದೇವರು !
12 January 2025
‘ನಕ್ಸಲರಿಗೆ ಶರಣಾದ ಸರಕಾರ’- ಛಲವಾದಿ ನಾರಾಯಣಸ್ವಾಮಿ
11 January 2025
LATEST Post
ಬಿಗ್ ಬಾಸ್ ಮನೆಯಿಂದ ಚೈತ್ರ ಕುಂದಾಪುರ ಔಟ್..!
12 January 2025
10:48
ಬಿಗ್ ಬಾಸ್ ಮನೆಯಿಂದ ಚೈತ್ರ ಕುಂದಾಪುರ ಔಟ್..!
12 January 2025
10:48
Shocking News: 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ!!
12 January 2025
09:45
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಪಾಲ್ಗೊಳ್ಳುವ ಸಾಧ್ಯತೆ
12 January 2025
09:41
ಐಎಎಸ್ ಅಧಿಕಾರಿ ಮನೀಶ್ ವರ್ಮಾ ಯಶಸ್ಸಿನ ಕಥನ
12 January 2025
09:04
ಪ್ರತಿದಿನ ಬೆಳಗ್ಗೆ ನೆನೆಸಿಟ್ಟ ಡ್ರೈ ಪ್ರೂಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ
12 January 2025
09:02
18 ರಂದು ಸಿಎಂ ವಾಣಿವಿಲಾಸ ಸಾಗರಕ್ಕೆ ಬಾಗಿನ: ಸಚಿವ ಡಿ.ಸುದಾಕರ್
12 January 2025
07:52
ನಿರಂತರ ಅಭ್ಯಾಸದ ಮೂಲಕ ಸ್ವರದಲ್ಲಿ ಮಾಂತ್ರಿಕತೆ: ಕೆ.ಎಸ್.ನವೀನ್
12 January 2025
07:45
ಉತ್ತಮ ಉದ್ಯೋಗಕ್ಕಾಗಿ ಈ ಮೂರು ಗ್ರಹಗಳನ್ನು ಮೆಚ್ಚಿಸಲು ಜ್ಯೋತಿಷ್ಯ ಪರಿಹಾರ ಕ್ರಮಗಳಿವು.
12 January 2025
07:40
ವಚನ.: -ಅಲ್ಲಮಪ್ರಭುದೇವರು !
12 January 2025
07:36
ನನ್ನ ಹಣ ನನಗೆ ವಾಪಸ್ ಕೊಡಿಸಿ ಎಂದು ಪೊಲೀಸರು ಜಪ್ತಿ ಕೋರ್ಟ್ ಮೊರೆ ಹೋದ ನಟ ದರ್ಶನ್
11 January 2025
18:34
ರಾಜ್ಯದಲ್ಲಿ ಮತ್ತೆ ಜಾತಿಗಣತಿ ವರದಿ ಕಿಚ್ಚು – ನಾಳೆ ತುರ್ತು ಸಭೆ ಕರೆದ ರಾಜ್ಯ ಒಕ್ಕಲಿಗ ಸಂಘ
11 January 2025
18:13
‘ನಕ್ಸಲರಿಗೆ ಶರಣಾದ ಸರಕಾರ’- ಛಲವಾದಿ ನಾರಾಯಣಸ್ವಾಮಿ
11 January 2025
18:02
ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ
11 January 2025
17:13
ದ್ವೇಷ ಭಾಷಣ ಮಾಡಿದ ಆರೋಪ: ಕೇರಳ ಬಿಜೆಪಿ ನಾಯಕ ಪಿ.ಸಿ. ಜಾರ್ಜ್ ವಿರುದ್ಧ ಕೇಸ್ ದಾಖಲು
11 January 2025
16:50
‘ನನಗೆ ಯಾರ ಬೆಂಬಲವೂ ಬೇಡ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ’- ಡಿಕೆಶಿ
11 January 2025
16:32
ಅಸ್ಸಾಂನ 10 ತಿಂಗಳ ಮಗುವಿನಲ್ಲಿ ಹೆಚ್ಎಂಪಿ ವೈರಸ್ ಪತ್ತೆ
11 January 2025
16:31
ಮಕ್ಕಳಾಗದ ಮಹಿಳೆಗೆ ಗರ್ಭ ಧರಿಸುವಂತೆ ಮಾಡುವ ಉದ್ಯೋಗ!! ಹೀಗೊಂದು ವಿಚಿತ್ರ ಉದ್ಯೋಗದ ಜಾಹೀರಾತು
11 January 2025
15:26
ಜಿಮ್ ಮಾಡುವಾಗ ನಟಿ ರಶ್ಮಿಕಾ ಮಂದಣ್ಣಗೆ ಗಾಯ!
11 January 2025
15:14
‘ಕಾಂಗ್ರೆಸ್ ಸದಾ ದಲಿತ ಸಮುದಾಯವನ್ನು ಕತ್ತಲಲ್ಲಿ ಇಟ್ಟಿದೆ’- ಪ್ರಹ್ಲಾದ್ ಜೋಶಿ
11 January 2025
15:10
‘ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ’- ಛಲವಾದಿ ನಾರಾಯಣಸ್ವಾಮಿ
11 January 2025
14:00
‘ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ’ – ಡಿಸಿಎಂ ಡಿಕೆ ಶಿವಕುಮಾರ್
11 January 2025
13:01
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಕೇಸ್: ಸಿಟಿ ರವಿಗೆ ಕೊಲೆ ಬೆದರಿಕೆ
11 January 2025
13:01
ಬೆಂಗಳೂರು: ಮಹಿಳಾ ಜಡ್ಜ್ ಮುಂದೆ ಮಾತ್ರ 164 ದಾಖಲು ಮಾಡೋದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ
11 January 2025
12:06
ಮಲ್ಪೆ: ಆಯತಪ್ಪಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
11 January 2025
12:02
ಉಡುಪಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
11 January 2025
11:03
ಶರಣಾದ 6 ನಕ್ಸಲರು ಬಳಸುತ್ತಿದ್ದ AK 56 ಗನ್, ರಿವಾಲ್ವಾರ್ ಪತ್ತೆ
11 January 2025
11:00
ಉಡುಪಿ: ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ, ಹೊತ್ತಿ ಉರಿದ ಲಾರಿ; ಓರ್ವ ಸಾವು
11 January 2025
10:19
ಇಂದು ಸಿಎಂ ಸಿದ್ದರಾಮಯ್ಯ ದ.ಕ.ಜಿಲ್ಲೆಗೆ- ನರಿಂಗಾನ ಕಂಬಳ ಉದ್ಘಾಟನೆ
11 January 2025
10:14
ನಕ್ಸಲರು ಮುಚ್ಚಿಟ್ಟಿದ್ದ ಎಕೆ 47 ಸೇರಿದಂತೆ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ
11 January 2025
09:32
ಮಂಗಳೂರು: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಹಿಂದೂ ಯುವಕನನ್ನು ವಿವಾಹವಾಗಿ ಪತ್ತೆ
11 January 2025
09:27
ಮದುವೆಯಾದ ಪುರುಷರು ಪರ ಸ್ತ್ರೀಯರ ಮೇಲೆ ವ್ಯಾಮೋಹ ಹೊಂದಲು ಕಾರಣ.?
11 January 2025
09:07
ಡಿಕೆ ಶಿವಕುಮಾರ್ ಸಿಎಂ ಆಗೋದು ನಿಶ್ಚಿತ – ವಿನಯ್ ಗುರೂಜಿ ಭವಿಷ್ಯ
11 January 2025
09:03
ಗರ್ಭಿಣಿಯಾಗಿದ್ರೂ ಕೆಲಸ ಮಾಡಿಕೊಂಡೇ UPSCಗೆ ತಯಾರಿ ನಡೆಸಿ IAS ಆದ ಪದ್ಮಿನಿ ನಾರಾಯಣ್
11 January 2025
09:02