ಉತ್ತರ ಪ್ರದೇಶ: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಪೊಲೀಸ್ ವಾಹನವನ್ನು ಬಳಕೆ ಮಾಡಿಕೊಂಡು ರೀಲ್ಸ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದಿರಾಪುರಂ ಪ್ರದೇಶದಲ್ಲಿ ಅಧಿಕಾರಿಗಳು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಪೊಲೀಸ್ ವಾಹನ ಬಳಸಿ ವಿಡಿಯೋ ಮಾಡಿದ್ದಾನೆ.
ಇನ್ನು ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕ ರೀಲ್ ಮಾಡಿದ್ದು, ವಿಡಿಯೋ ವ್ಯಾಪಕ ಗಮನ ಸೆಳೆದ ನಂತರ ಅಧಿಕಾರಿಗಳು ಕ್ರಮ ಕೈಗೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ.