ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರುವಾಗಲೇ ಆಗಂತುಕರು ಸರ್ಕಾರಕ್ಕೆ ಬಾಂಬ್ ಬೆದರಿಕೆಯ ಸಂದೇಶವೊಂದನ್ನು ಕಳುಹಿಸಿದ್ದು, ಸರ್ಕಾರಕ್ಕೆ ತಲೆನೋವಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಸಿಎಂ ನನಗಾವುದೇ ಬಾಂಬ್ ಬೆದರಿಕೆ ಕರೆಗಳಾಗಲಿ, ಸಂದೇಶಗಳಾಗಲಿ ಬಂದಿಲ್ಲ ಎಂದಿದ್ದಾರೆ! ಮಂಗಳವಾರ ಸಿಎಂ, ಗೃಹಸಚಿವರಿಗೆ [email protected] ಎಂಬ ಇ-ಮೇಲ್ ನಿಂದ ಬೆದರಿಕೆಯ ಸಂದೇಶವೊಂದು ಬಂದಿದೆಎಮ್ಮಲಾಗುತ್ತಿದೆ. ನೀವು ರಾಮೇಶ್ವರ ಕೆಫೆ ಬ್ಲಾಸ್ಟ್ ಎಂಬ ಟ್ರೈಲರ್ ಮಾತ್ರ ನೋಡಿದ್ದೀರಿ.
ಇನ್ನೂ ಅಂಬಾರಿ ಉತ್ಸವ ಬ್ಲಾಸ್ಟ್, ಸಾರ್ವಜನಿಕ ಕಟ್ಟಡಗಳು ಸೇರಿದಂತೆ ಸರಣಿ ಬಾಂಬ್ ಬ್ಲಾಸ್ಟ್ ಗಳೆಂಬ ಸಿನಿಮಾ ಬಾಕಿ ಇದೆ..! ಹಾಗಾಗಬಾರದು ಅಂದ್ರೆ ನೀವು ನಮಗೆ 2.5 ಮಿಲಿಯನ್ ಹಣವನ್ನು ಕೊಡಬೇಕು ಅಂತಾ ಮೇಲ್ ನಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಆದರೆ, ಸರ್ಕಾರ ಈ ಬಗ್ಗೆ ಅಲ್ಲಗಳೆದಿದೆ. ಮಾರ್ಚ್ 1 ರಂದು ಬೆಂಗಳೂರಿನ ಕಾಡುಗೋಡಿ ಬಳಿಯ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆದರೆ, ಯಾವುದೇ ಸಾವು ನೋವು ಉಂಟಾಗಿರಲಿಲ್ಲ. ಮತ್ತೊಂದೆಡೆ, ಸಿಎಂ, ಡಿಸಿಎಂ ಮತ್ತು ಗೃಹಸಚಿವರು ಸೇರಿದಂತೆ ಮತ್ತಿತರರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿದಾಗ, ಇಂಥ ಯಾವುದೇ ಸಂದೇಶಗಳು ಸರ್ಕಾರಕ್ಕೆ ಬಂದಿಲ್ಲವೆಂದು ಅಲ್ಲಗಳೆಸಿದ್ದಾರೆ.