ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಪಡೆದಿದ್ದು, ರಾಜಕೀಯ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಸಹ ಮತಬೇಟೆಗಾಗಿ ಕರುನಾಡಿಗೆ ಇದೇ ಭಾನುವಾರ ಆಗಮಿಸುತ್ತಿದ್ದು, ಅಬ್ಬರ ಪ್ರಚಾರ ಕೈಗೊಳ್ಳಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ಹೆಬ್ಬಾಳದ ಸಂಜಯನಗರ, ನಾಗಶೆಟ್ಟಿಹಳ್ಳಿ, ಬ್ಯಾಟರಾಯನಪುರದ ಕೊಡಿಗೇಹಳ್ಳಿ, ಗುಂಡಾಂಜನೇಯ ದೇವಾಲಯದಿಂದ ಜಕ್ಕೂರುವರೆಗೆ ಭರ್ಜಿ ರೋಡ್ ಶೋ ನಡೆಸಲಿದ್ದಾರೆ.