ಈ ಪುಟ್ಟ ಗಸಗಸೆಯಲ್ಲಿದೆ ಅದ್ಭುತ ಪ್ರಯೋಜನಗಳು

ನಾವು ಪದಾರ್ಥಕ್ಕೆ, ಪಾಯಸಕ್ಕೆ ಹಾಕುವ ಈ ಪುಟ್ಟ ಪುಟ್ಟ ಗಸಗಸೆಯಲ್ಲಿ ಎಷ್ಟೆಲ್ಲಾ ಆರೋಗ್ಯಕಾರಿ ಗುಣಗಳಿವೆ ಅನ್ನೋದು ನಿಮಗೆ ಗೊತ್ತಾ?

ಗಸಗಸೆಯು ಸಸ್ಯದಿಂದ ಪಡೆಯುವ ಈ ಎಣ್ಣೆಬೀಜ ಬೆಳ್ಳುಳ್ಳಿ ಮತ್ತು ಸಾಸಿವೆಯ ಹೊರತಾಗಿ, ಭಾರತೀಯ ಅಡಿಗೆಮನೆಯಲ್ಲಿ ಕಂಡುಬರುವ ಸ್ಥಿರ ಮಸಾಲೆ ಪದಾರ್ಥವಾಗಿದೆ. ಇದನ್ನು ಹಿಂದಿಯಲ್ಲಿ ಖುಸ್ ಖುಸ್ ಎಂದೂ, ತಮಿಳಿನಲ್ಲಿ ಕಸಕಸ ಎಂದೂ, ತೆಲುಗಿನಲ್ಲಿ ಗಸಗಸುಲು ಎಂದೂ ಕರೆಯಲಾಗುವ, ಹೂಗಳಿಂದ ತುಂಬಿರುವ ಸಸ್ಯವಾದ ಗಸಗಸೆಯನ್ನು ಆಗ್ನೇಯ ಯೂರೋಪ್ ಮತ್ತು ಪೂರ್ವ ಹಾಗೂ ದಕ್ಷಿಣ ಏಷ್ಯಾದಾದ್ಯಂತ ಹೆಚ್ಚು ಬೆಳೆಯಲಾಗುತ್ತದೆ.

​ಗಸಗಸೆಯ ಪ್ರಯೋಜನಗಳು

Advertisement

ಪಾಪವಿರ್ ಸೊಮ್ನಿಫೆರಮ್ ಎನ್ನುವ ಸಸ್ಯಶಾಸ್ತ್ರೀಯ ಹೆಸರಿನ ಗಸಗಸೆ ಅಡಿಗೆಗೆ ಮಾತ್ರ ಪ್ರಯೋಜನವಷ್ಟೇ ಅಲ್ಲದೇ ಇದು ಹೃದಯ ರೋಗ, ಜೀರ್ಣ, ಕೂದಲು ಮತ್ತು ಚರ್ಮದ ಸಮಸ್ಯೆಗಳು, ನಿದ್ರಾಹೀನತೆ, ಮಧುಮೇಹ, ಮೂಳೆಗಳ ಅಸಹಜತೆ ಮತ್ತು ನರ ಸಮಸ್ಯೆಗಳಂತಹ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.

ಮಧ್ಯಯುಗದಲ್ಲಿ, ಗಸಗಸೆಯನ್ನು ಹೆಚ್ಚಾಗಿ ಮಂಪರುಕಾರಕವಾಗಿ ಬಳಸಲಾಗುತ್ತಿತ್ತು. ಇದನ್ನು ಹಾಲು, ಅಫೀಮು ಅಥವಾ ಜೇನುತುಪ್ಪದ ಮಿಶ್ರಣದೊಂದಿಗೆ ಬಳಸಿ ಅಳುವ ಮಕ್ಕಳನ್ನು ಸಮಾಧಾನಗೊಳಿಸಲಾಗುತ್ತಿತ್ತು, ಇದು ನಿದ್ರೆ ಬರಿಸಲು ಮತ್ತು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗಳನ್ನು ಸರಿಪಡಿಸಲು ಬಳಸಲಾಗುತ್ತಿತ್ತು.

​3 ವಿಧಗಳಿವೆ

ಗಸಗಸೆಯಲ್ಲಿ ಮುಖ್ಯವಾಗಿ 3 ವಿಧಗಳಿವೆ ಬಿಳಿ ಗಸಗಸೆ (ಇದನ್ನು ಏಷ್ಯನ್ ಅಥವಾ ಭಾರತೀಯ ಗಸಗಸೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಅಡಿಗೆಗೆ ಬಳಸಲಾಗುತ್ತದೆ), ನೀಲಿ ಗಸಗಸೆ (ಇದನ್ನು ಯೂರೋಪಿಯನ್ ಗಸಗಸೆ ಎಂದು ಕರೆಯಲಾಗುತ್ತದೆ, ಇದನ್ನು ಬ್ರೆಡ್ ಹಾಗೂ ಇತರ ಕನ್ಫೆಕ್ಷನರಿ ಆಹಾರಗಳಲ್ಲಿ ಬಳಸಲಾಗುತ್ತದೆ) ಹಾಗೂ ಓರಿಯೆಂಟಲ್ ಗಸಗಸೆ (ಇದನ್ನು ಅಫೀಮು ಗಸಗಸೆ ಎಂದು ಕರೆಯಲಾಗುತ್ತದೆ, ಇದು ಅಫೀಮನ್ನು ಉತ್ಪಾದಿಸುತ್ತದೆ ಮತ್ತು ವಾಣಿಜ್ಯ ಬಳಕೆಗೆ ಪ್ರಯೋಜನಕಾರಿಯಾಗಿದೆ).

ಮಹಿಳೆಯರಲ್ಲಿ ಬಂಜೆತನ ನಿವಾರಿಸುತ್ತದೆ

ಗಸಗಸೆ ಮತ್ತು ಅದರ ಎಣ್ಣೆ ಮಹಿಳೆಯರಲ್ಲಿ ಬಂಜೆತನ ನಿವಾರಣೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಕಟ್ಟಿದ ಫೆಲೋಪಿಯನ್ ನಾಳಗಳು ಫಲವತ್ತಾದ ಅಂಡ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಗಸಗಸೆ ಬೀಜದಿಂದ ಫೆಲೋಪಿಯನ್ ನಾಳ ಫ್ಲಶ್ ಮಾಡುವುದರಿಂದ, ಫೆಲೋಪಿಯನ್ ನಾಳದಿಂದ ಯಾವುದೇ ಕಸ ಅಥವಾ ಶ್ಲೇಷ್ಮ ಕಣಗಳು ಕರಗಿ, ಅಡಚಣೆ ನಿವಾರಣೆಯಾಗುತ್ತದೆ, ಈ ಮೂಲಕ ಇದು ಫಲವತ್ತತೆಯ ಸಾಧ್ಯತೆ ಹೆಚ್ಚಿಸುತ್ತದೆ. ಗಸಗಸೆಯಲ್ಲಿರುವ ಲಿನಿನ್ ಎನ್ನುವ ಅಂಶ ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ.

​ನಿದ್ರಾಹೀನತೆಯನ್ನು ನಿವಾರಿಸುತ್ತದೆ

ಗಸಗಸೆಯಲ್ಲಿ ಮೆಗ್ನೀಷಿಯಂ ಅಂಶ ಸಮೃದ್ಧವಾಗಿದ್ದು ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ, ಒಳ್ಳೆಯ ಗುಣಮಟ್ಟದ, ಹೆಚ್ಚಿನ ಸಮಯದ ಶಾಂತ ನಿದ್ರೆ ಮಾಡಬಹುದು. ಮಲಗುವ ಮೊದಲು ಗಸಗಸೆಯ ಟೀ ಅಥವಾ ಗಸಗಸೆಯ ಪೇಸ್ಟ್ ಅನ್ನು ಹಾಲಿನೊಂದಿಗೆ ಕುಡಿಯುವುದರಿಂದ, ಇದು ಶರೀರದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ನಿದ್ರಿಸಲು ಪ್ರಚೋದಿಸುತ್ತದೆ ಮತ್ತು ನಿದ್ರಾಹೀನತೆಯಂತಹ ನಿದ್ರೆಗೆ ಸಂಬಂಧಿಸಿದ ಅಸಹಜತೆಯನ್ನು ಗುಣಪಡಿಸುತ್ತದೆ.

ಗ್ರಹಿಕೆಯ ಕ್ಷಮತೆ ಹೆಚ್ಚಿಸುತ್ತದೆ

ಗಸಗಸೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ಇದು ಸ್ವಾಭಾವಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಮತ್ತು ಕೆಂಪುರಕ್ತಕಣಗಳನ್ನು ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ಮೆದುಳಿಗೆ ಆಮ್ಲಜನಕ ಮತ್ತು ಕೆಂಪು ರಕ್ತಕಣಗಳ ಸರಿಯಾದ ಪೂರೈಕೆ ನರವಾಹಕಗಳ ಉತ್ಪಾದನೆ ನಿಯಂತ್ರಿಸಲು ಮತ್ತು ಗ್ರಹಿಕಾ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಮೂಲಕ, ಗಸಗಸೆ ಏಕಾಗ್ರತೆ ಹೆಚ್ಚಿಸಲು ಮತ್ತು ಚಿತ್ತಭ್ರಮೆ ಮತ್ತು ಆಲ್ಜೀಮರ್ಸ್ ರೋಗಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡುವ ಮೆದುಳಿನ ಆಹಾರವಾಗಿದೆ.

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಗಸಗಸೆಯಲ್ಲಿ ತಾಮ್ರದ ಖನಿಜಾಂಶ ಮತ್ತು ಸತುವಿನ ಅಂಶದೊಂದಿಗೆ ಕ್ಯಾಲ್ಸಿಯಂ ಹೆಚ್ಚಾಗಿದೆ. ಇವು ಮೂಳೆಗಳ ಖನಿಜ ಸಾಂದ್ರತೆ ಹೆಚ್ಚಿಸಿ, ಮೂಳೆಗಳು ಹಾಗೂ ಸಂಪರ್ಕಿತ ಅಂಗಾಂಶಗಳನ್ನು ದೃಢಪಡಿಸುವ ಮೂಲಕ, ಮೂಳೆಗಳು ಮುರಿಯದಂತೆ ರಕ್ಷಿಸುತ್ತವೆ. ಇದರಲ್ಲಿರುವ ಮ್ಯಾಂಗನೀಸ್ ಮೂಳೆಗಳಲ್ಲಿ ಕೊಲ್ಯಾಜಿನ್ ಉತ್ಪಾದಿಸಲು ನೆರವಾಗುವ ಮೂಲಕ, ಮೂಳೆಗಳು ಹಾನಿಗೊಳಗಾಗದಂತೆ ರಕ್ಷಿಸಿ ಮೂಳೆಗಳ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ.

​ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ

ನಾರಿನಿಂದ ಸಮೃದ್ಧವಾಗಿರುವ ಗಸಗಸೆ ಜೀರ್ಣವನ್ನು ಉತ್ತೇಜಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇದು ಆಹಾರದಿಂದ ಪೋಷಕಾಂಶಗಳ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ಗುಣಪಡಿಸುವುದರೊಂದಿಗೆ ಗುದದ್ವಾರದ ಮೂಲಕ ತ್ಯಾಜ್ಯ ಪದಾರ್ಥಗಳು ಸುಲಭವಾಗಿ ಹೋಗಲು ನೆರವಾಗುತ್ತದೆ.

ಹೃದಯ ರಕ್ತನಾಳಗಳ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಇದರಲ್ಲಿ ನಾರಿನಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಕಬ್ಬಿಣಾಂಶಭರಿತವಾದ ಗಸಗಸೆ ನೈಸರ್ಗಿಕವಾಗಿ ರಕ್ತ ಶುದ್ಧೀಕರಿಸುವುದರೊಂದಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಮತ್ತು ಕೆಂಪುರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಓಲಿಕ್ ಆಮ್ಲ ರಕ್ತದೊತ್ತಡ ಕಡಿಮೆ ಮಾಡಿದರೆ, ಒಮೆಗಾ-6 ಫ್ಯಾಟಿ ಆಮ್ಲ ಇದು ಹೃದಯಕ್ಕೆ ಹೆಚ್ಚು ಪ್ರಯೋಜನವಾಗುವಂತೆ ಮಾಡಿದೆ, ಇದು ಹೃದಯಾಘಾತ ಮತ್ತು ಹೃದಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

​ಚರ್ಮ ಮತ್ತು ಕೂದಲಿನ ಆರೋಗ್ಯ

ಗಸಗಸೆ ಸಮೃದ್ಧವಾದ ಆಂಟಿಆಕ್ಸಿಡೆಂಟ್ ಹೊಂದಿದ್ದು ಇದು ಚರ್ಮದ ಉರಿಯೂತ, ನೆತ್ತಿಯ ಸೋಂಕುಗಳ ಸಾಧ್ಯತೆ ಕಡಿಮೆ ಮಾಡುವುದರೊಂದಿಗೆ, ಚರ್ಮ ಮತ್ತು ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಗಸಗಸೆಯಲ್ಲಿರುವ ಅಧಿಕ ಪ್ರಮಾಣದ ಲಿನೋಲಿಕ್ ಆಮ್ಲ ಇದು ಕಜ್ಜಿ, ಸುಟ್ಟಗಾಯ ಮತ್ತು ಕೆರೆತಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಗಸಗಸೆಯ ಪೇಸ್ಟ್ ಅನ್ನು ಮುಖದ ಮೇಲೆ ಮಾಸ್ಕ್ ನಂತೆ ಹಾಕುವುದರಿಂದ ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಿಸಿ, ಸ್ವಚ್ಛವಾದ, ಹೊಳೆಯುವ ಚರ್ಮ ನೀಡುವ ಮೂಲಕ, ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement