ಉಡುಪಿ: ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.21ರಂದು ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಉದ್ಯಾವರದ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತರಾದವರನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ತಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ (22) ಎಂದು ಗುರುತಿಸಲಾಗಿದೆ.
ಉದ್ಯಾವರದ ಐಸಿವೈಎಂ ಘಟಕದ ಸದಸ್ಯರಿದ್ದ ಫಿಗೋ ಕಾರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಲೆಸ್ಟನ್ ಪಿಂಟೊ (22), ಜಸ್ಟಿನ್ ಕಾರ್ಡೋಜಾ (22), ವಿಲ್ಸನ್ ಮಾರ್ಟಿಸ್ (23) ಮತ್ತು ಗ್ಲಾಡೆನ್ ಡಿಸಿಲ್ವಾ (23) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಉದ್ಯಾವರದ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದು ಬಂದಿದೆ.ಯುವ ನಾಯಕನ ಅಗಲಿಕೆಗೆ ಕ್ರೈಸ್ತ ಸಮುದಾಯ ಸಂತಾಪ ಸೂಚಿಸಿದೆ.