ಡೆಹ್ರಾಡೂನ್:ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ನಾಲ್ವರು ಸೇರಿ 9 ಮಂದಿ ಚಾರಣಿಗರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರು ಬೆಂಗಳೂರಿನ ಸುಜಾತ (52), ಪದ್ಮಿನಿ ಹೆಗಡೆ (35), ಚಿತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (52), ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ ಕೆಪಿಎಸ್ (50) ವಿನಾಯಕ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ 18, ಪುಣೆಯಿಂದ ಒಬ್ಬರು ಜೊತೆ ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳು ತೆರಳಿದ್ದರು. ಉತ್ತರಾಖಂಡದ ಸಹಸ್ತ್ರ ತಾಲ್‌ನಲ್ಲಿ ಸಿಲುಕಿದ್ದ ಚಾರಣಿಗರ ಪೈಕಿ ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್, ಸ್ಮೃತಿ, ಸೀನಾ ಅವರನ್ನು ರಕ್ಷಣೆ ಮಾಡಲಾಗಿದೆ.
13 ಜನರ ಸ್ಥಿತಿ ಗಂಭೀರವಾಗಿದ್ದು ವಾಯು ಪಡೆಯಿಂದ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ -ಕುಶಕಲ್ಯಾಣ – ಸಹಸ್ತ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದಿದ್ದರು. 9 ಚಾರಣಿಗರು ಮೃತಪಟ್ಟಿದ್ದನ್ನು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿ ದೇವೇಂದ್ರ ಪಟವಾಲ್ ಖಚಿತ ಪಡಿಸಿದ್ದಾರೆ.
ಚಾರಣವನ್ನು ಮೌಂಟೇನಿಯರಿಂಗ್ ಫೌಂಡೇಶನ್ ಆಯೋಜಿಸಿತ್ತು. ಗಢವಾಲ್ ಜಿಲ್ಲಾಧಿಕಾರಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು ಭಾರತೀಯ ವಾಯುಪಡೆಯ ನೆರವನ್ನು ಪಡೆಯಲಾಗುತ್ತಿದೆ.