ಮುಂಬೈ : ಇಸ್ರೇಲ್ ಗೆ ಫಿಲ್ಮ್ ಫೆಸ್ಟಿವಲ್ ಗೆ ಹೋಗಿ ಯುದ್ದ ಸನ್ನಿವೇಶದಲ್ಲಿ ಸಿಕ್ಕಿ ಹಾಕಿಕೊಂಡು, ಸುರಕ್ಷಿತವಾದಿ ಭಾರತಕ್ಕೆ ಬಂದಿಳಿದಿ ಬಾಲಿವುಡ್ ನಟಿ ನುಶ್ರುತ್ ಭರುಚಾ ಇದೀಗ ತಮ್ಮ ಅನುಭವನನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ಬೆಳಿಗ್ಗೆ ಏಳುವಷ್ಟರಲ್ಲಿ ಕಿವಿ ಕಿವುಡಾಗುವಷ್ಟು ಜೋರಾಗಿ ಬಾಂಬ್ ಸ್ಫೋಟಗೊಳ್ಳುವ ಶಬ್ದ ಕೇಳಿಸುತ್ತಿತ್ತು. ಶನಿವಾರವೇ ಭಾರತಕ್ಕೆ ವಾಪಸ್ಸಾಗಬೇಕೆಂದು ಯೋಚಿಸಿದ್ದೆವು. ಆದರೆ ಶನಿವಾರ ಬೆಳಿಗ್ಗೆ ಆಗುವಷ್ಟರಲ್ಲಿ ನಗರದ ಚಿತ್ರಣವೇ ಬದಲಾಗಿತ್ತು. ಎಲ್ಲೆಂದರಲ್ಲಿ ಬಾಂಬ್ ಸ್ಫೋಟ, ಸೈರನ್ಗಳ ಸದ್ದು ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಹೊಟೇಲ್ನಲ್ಲಿದ್ದವರನ್ನೆಲ್ಲ ಆಶ್ರಯ ಶಿಬಿರಕ್ಕೆ ತೆರಳುವಂತೆ ಹೇಳಲಾಗಿತ್ತು.
ಬಹಳಷ್ಟು ಸಮಯ ಶೆಲ್ಟರ್ನಡಿಯಲ್ಲಿಯೇ ಇದ್ದೆವು. ಆಗ ಇಸ್ರೇಲ್ ಮೇಲೆ ದಾಳಿಯಾಗಿರುವುದು ಅರಿವಿಗೆ ಬಂತು. ಯಾವುದಕ್ಕೂ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿಲಿಲ್ಲ.
ಹೊಟೇಲ್ನಿಂದ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬರುವುದು ಅಷ್ಟು ಸುಲಭವಾಗಿರಲ್ಲ. ವಾಹನಗಳ ಮೇಲೆ ಕಣ್ಣೆದುರೇ ದಾಳಿಯಾಗುತ್ತಿತ್ತು. ಕೊನೆಗೂ ಭಯದಲ್ಲಿಯೇ ವಿಮಾನ ನಿಲ್ದಾಣಕ್ಕೆ ತಲುಪಿದ್ದೆವು. ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದೆವು. ಅಲ್ಲಿಯ ವಾತಾವರಣ ನಿಜಕ್ಕೂ ಭಯ ಹುಟ್ಟಿಸುವಂತಿತ್ತು’ ಎಂದು ತಾವು ಕಂಡ ಇಸ್ರೇಲ್ ಯುದ್ಧದ ಚಿತ್ರಣವನ್ನು ಭರುಚಾ ವಿವರಿಸಿದ್ದಾರೆ.


































