ದಕ್ಷಿಣ ಕನ್ನಡ: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜುಲೈ 29ರವರೆಗೆ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಅದೇ ರೀತಿ ಪಿಯು, ಪದವಿ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
[vc_row][vc_column]
BREAKING NEWS
- ಉಗ್ರನಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಹೇಳಿಕೊಟ್ಟ ಜಮ್ಮು ಕಾಶ್ಮೀರದ ಡೆಪ್ಯುಟಿ ಎಸ್ಪಿ ಅರೆಸ್ಟ್
- ಕೆಲಸ ತೊರೆದ ಮಹಿಳೆ 8 ಸಾವಿರ ಕೋಟಿ ರೂ. ಮೌಲ್ಯದ ಕಂಪನಿಯ ಕಟ್ಟಿ ಬೆಳೆಸಿದರು
- ಸ್ಲೀಪ್ ಮೋಡ್ ನಿಂದ ಎಚ್ಚರವಾಗುತ್ತಾ ವಿಕ್ರಂ, ಪ್ರಗ್ಯಾನ್?
- ಭಾರತ ಕೊಟ್ಟ ಅಧ್ಯಕ್ಷೀಯ ಸೂಟ್ ನಿರಾಕರಿಸಿದ್ದ ಜಸ್ಟಿನ್ ಟ್ರುಡೋ
- ಟಿವಿ ವಾಹಿನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ದೇಶನ
- ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ 19 ವರ್ಷದ ಆಂಟಿಮ್ ಪಂಗಲ್
- ಚೈತ್ರಾ ಹೇಳಿದಂತೆ ಮಾಡಿದ್ದೀನಿ– ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡ ಅಭಿನವ ಹಾಲಶ್ರೀ..!
- ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್.! ಈ ಮಾನದಂಡಗಳು ಇಲ್ಲ.!
- ಈ ಕಾರಣಕ್ಕೆ ಮೈಸೂರು ದಸರ ಸರಳ.! ಡಾ.ಹೆಚ್.ಸಿ ಮಹದೇವಪ್ಪ
- ಇಂದು ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಮಹತ್ವದ ದಿನವಾಗುತ್ತಾ.?