ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲೇ ಬೇಕಾದ ಹಣ್ಣು. ಕಲ್ಲಂಗಡಿ ಹಣ್ಣಿನ ಜ್ಯೂಸ್, ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿದಾಯ್ತು. ಕಲ್ಲಂಗಡಿ ಹಣ್ಣಿನ ಬಿಸಿ ಬಿಸಿ ಕೇಸರಿ ಬಾತ್ ಅನ್ನು ಟ್ರೈ ಮಾಡಿ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಹುರಿದ ರವಾ 1/2 ಕಪ್ ಕಲ್ಲಂಗಡಿ ಹಣ್ಣಿನ ರಸ 1 1/2 ಕಪ್ ಬೆಲ್ಲ 3/4 ಕಪ್ ಗೋಡಂಬಿ-ದ್ರಾಕ್ಷಿ ಸ್ವಲ್ಪ ತುಪ್ಪ 2 ಚಮಚ ಮಾಡುವ ವಿಧಾನ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ-ದ್ರಾಕ್ಷಿಯನ್ನು ಹುರಿದಿಟ್ಟುಕೊಳ್ಳಿ.
ಅದೇ ಬಾಣಲೆಯಲ್ಲಿ ಕಲ್ಲಂಗಡಿ ಹಣ್ಣಿನ ರಸ ಹಾಕಿ ಬಿಸಿ ಮಾಡಿ. ಅದಕ್ಕೆ ಬೆಲ್ಲ ಹಾಕಿ ಕರಗಿಸಿ. ಬೆಲ್ಲ ಕರಗಿ, ಕಲ್ಲಂಗಡಿ ಹಣ್ಣಿನ ರಸ ಕುದಿಬಂದ ನಂತರ ಹುರಿದ ರವಾ ಹಾಕಿ ಗಂಟಿರದಂತೆ ಚೆನ್ನಾಗಿ ಕೈಯಾಡಿಸಿ. ಕೇಸರಿ ಹದಕ್ಕೆ ಬಂದನಂತರ ಬಾಣಲೆಯನ್ನು ಕೆಳಗಿಳಿಸಿ, ಅದಕ್ಕೆ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಅಲಂಕರಿಸಿ ಬಿಸಿಬಿಸಿಯಾಗಿ ಕಲ್ಲಂಗಡಿ ಹಣ್ಣಿನ ಕೇಸರಿ ಬಾತ್ ಸವಿಯಿರಿ.