ಪಾಟ್ನಾ: ಬಿಹಾರದ ನಾವಾಡಾ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಮನೆಯಲ್ಲಿ ಯುವಕನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ನೀತು ಸಿಂಗ್ ಅವರ ದೂರದ ಸಂಬಂಧಿ 24 ವರ್ಷದ ಪಿಯೂಷ್ ಸಿಂಗ್ ಎಂಬಾತನೇ ಮೃತಪಟ್ಟಾತ.
ಈ ಕುರಿತು ಮಾಹಿತಿ ನೀಡಿರುವ ಎಸ್ ಪಿ ಅಂಬರೀಶ್ ರಾಹುಲ್, ಪೊಲೀಸರು ಪಿಯೂಷ್ ಮೃತದೇಹ ಪತ್ತೆ ಮಾಡಿದ ಸಮಯದಲ್ಲಿ ಶಾಸಕಿ ಮನೆಯಲ್ಲಿ ಇರಲಿಲ್ಲ. ನೀತು ಸಿಂಗ್ ಅವರ ಸೋದರಳಿಯ ಗೋಲು ಸಿಂಗ್ ಅವರಿಗೆ ಸೇರಿದ ಕೋಣೆಯಲ್ಲಿ ಪಿಯೂಷ್ ಸಿಂಗ್ ಶವ ಬಿದ್ದಿರುವುದನ್ನು ಪೊಲೀಸ್ ತಂಡ ಪತ್ತೆ ಮಾಡಿದೆ ಎಂದರು.
ಇನ್ನು ಪೊಲೀಸರು ಪ್ರಕರಣದ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಜ್ಞರು ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ಕರೆಸಿದ್ದಾರೆ.
































