ಬೆಂಗಳೂರು: ಕೇಂದ್ರ ಸೇವೆಯಿಂದ ಮರಳಿದ ಹಿರಿಯ ಅಧಿಕಾರಿ ಬಿಜಯ್ ಕುಮಾರ್ ಸಿಂಗ್ ಅವರನ್ನು ಸಿಐಡಿ (CID) ಎಡಿಜಿಪಿಯನ್ನಾಗಿ ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖಾ ತಂಡ ಎಸ್ಐಟಿಯ ಮುಖ್ಯಸ್ಥರಾಗಿದ್ದ ಬಿಜಯ್ ಸಿಂಗ್, ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸೇವೆಗೆ ತೆರಳಿದ್ದರು. ಇದೀಗ ಮತ್ತೆ ರಾಜ್ಯ ಸೇವೆಗೆ ಮರಳಿದ ಹಿನ್ನೆಲೆ ಸಿಐಡಿ ಎಡಿಜಿಪಿಯಾಗಿ ನಿಯುಕ್ತಿಗೊಳಿಸಲಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ಒಪ್ಪಿಸಿ 2019ರಲ್ಲಿ ಆದೇಶಿಸಿತ್ತು. ಬಿಜಯ್ ಸಿಂಗ್ ನೇತೃತ್ವದಲ್ಲಿ 21 ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಈ ಎಲ್ಲಾ ಅಧಿಕಾರಿಗಳು ಹೊಂದಿದ್ದ ಪದವಿ, ಜವಾಬ್ದಾರಿಗಳಿಂದ ವಿಮುಕ್ತಿಗೊಳಿಸಲಾಗಿತ್ತು.