ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಅವರು ಮದುವೆಯಾಗದೇ ತಮ್ಮ ಮಗುವನ್ನು ಸ್ವಾಗತಿಸುತ್ತಿದ್ದು, ಇದೀಗ ತನ್ನ ಬಾಯ್ಫ್ರೆಂಡ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಹಿಂದಿ, ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇಲಿಯಾನಾ ಇನ್ನೂ ಮದುವೆ ಆಗಿಲ್ಲ. ಆದರೂ ತಾಯಿ ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಟೊ ಹಂಚಿಕೊಂಡು ಆಶ್ಚರ್ಯ ಪಡಿಸಿದ್ದರು.
ಇಷ್ಟು ದಿನ ಇಲಿಯಾನಾ ಪ್ರೆಗ್ನೆಂಟ್ ಆಗಲು ಕಾರಣ ಯಾರು ಎನ್ನುವ ವಿಚಾರ ತಿಳಿಸಿರಲಿಲ್ಲ. ಆದರೆ ಇದೀಗ ತಮ್ಮ ಬಾಯ್ ಫ್ರೆಂಡ್ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಆತನ ಮುಖ ಮಾತ್ರ ಕಾಣಿಸಿಲ್ಲ.
ಅಂದ್ಹಾಗೆ, ನಟಿ ಕತ್ರಿನಾ ಕೈಫ್ ಸಹೋದರ ಸಭಾಸ್ಟಿನ್ ಜೊತೆ ಇಲಿಯಾನಾ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಅವರದ್ದೇ ಪೋಟೊ ಇಲಿಯಾನಾ ಹಂಚಿಕೊಂಡಿದ್ದಾರಾ ಎಂಬ ಅನುಮಾನು ಅಭಿಮಾನಿಗಳಲ್ಲಿ ಮೂಡಿದೆ.