ಕೇರಳ : ಸೊಸೆಯೊಬ್ಬಳು ತನ್ನ ವಯೋವೃದ್ದ ಅತ್ತೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ನಡೆದಿದ್ದು, ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 42 ವರ್ಷದ ಮಹಿಳೆಯೊಬ್ಬಳು ತನ್ನ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಆಕೆಯನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಕೊಲ್ಲಂನ ತೇವಲಕ್ಕರ ಮಂಜುಮೋಳ್ ಥಾಮಸ್ ಎಂದು ಗುರುತಿಸಲಾಗಿದೆ. ಆಕೆಯ ಪತಿಯ ಸ್ನೇಹಿತರೊಬ್ಬರು ಚಿತ್ರೀಕರಿಸಿದ ವೈರಲ್ ವೀಡಿಯೊದಲ್ಲಿ ಮಂಜುಮೋಳ್ ತನ್ನ 80 ವರ್ಷದ ಅತ್ತೆಯನ್ನು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.
ಆರೋಪಿ ಮಹಿಳೆ ತನ್ನ ಇಬ್ಬರು ಅಪ್ರಾಪ್ತ ಮಕ್ಕಳ ಮುಂದೆಯೆ ಅತ್ತೆಗೆ ಹೊಡೆದಿದ್ದು, ಮಕ್ಕಳಿಗೂ ಕೂಡ ಅಜ್ಜಿಗೆ ಹೊಡೆಯಲು ಪ್ರೇರೆಪಿಸಿದ್ದಾರೆ. ಮನೆಯ ಸೋಫಾ ಮೇಲೆ ಕುಳಿತಿದ್ದ ಅತ್ತೆಯನ್ನು ಆರೋಪಿ ಹಿಂಬದಿಯಿಂದ ಬಲವಾಗಿ ತಳ್ಳಿದ್ದಾರೆ. ಪಾಪ ಹಿರಿಯ ಜೀವ ನೆಲದ ಮೇಲೆ ಬಿದ್ದು, ಗಾಯಗೊಂಡಿದ್ದು, ತನ್ನ ಕೈಯಲ್ಲಿ ಆಗುತ್ತಿರುವ ನೋವುನ್ನು ತೋರಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿ ಮಹಿಳೆ ಎಲಿಯಮ್ಮ ವರ್ಗೀಸ್ ಅವರ ಮೇಲೂ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ, ಇದೀಗ ಕೇರಳ ಪೊಲೀಸರು ಆರೋಪಿ ಮಂಜುಮೋಳ್ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಅರೆಸ್ಟ್ ಮಾಡಿದ್ದಾರೆ.