ನವದೆಹಲಿ: ಕೋವಿಶೀಲ್ಡ್ ಲಸಿಕೆ ತಯಾರಕಾ ಕಂಪನಿ ಅಸ್ಟ್ರಾಜೆನೆಕಾವು ಪ್ರಪಂಚದಾದ್ಯಂತ ಔಷಧ ಮಾರುಕಟ್ಟೆಗಳಿಂದ ಲಸಿಕೆಯನ್ನು ಹಿಂಪಡೆಯಲು ನಿರ್ಧರಿಸಿದೆ.
ಅಡ್ಡಪರಿಣಾಮ ಆರೋಪದ ಬಳಿಕ ಲಸಿಕೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಅಸ್ಟ್ರಾಜೆನೆಕಾ ಕಂಪನಿ ಮುಂದಾಗಿದೆ. ಸಾಂಕ್ರಾಮಿಕ ರೋಗಗಳ ನಂತರ ಲಸಿಕೆಯ ಬೇಡಿಕೆಯು ಕಡಿಮೆಯಾಗಿದೆ. ಜೊತೆಗೆ ಲಸಿಕೆಯ ಉತ್ಪಾದನೆ ಹಾಗೂ ಪೂರೈಕೆಯನ್ನು ಕೂಡ ನಿಲ್ಲಿಸಲಾಗಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕೋವಿಡ್ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂಪಡೆಯುತ್ತಿರುವುದಾಗಿ ಅಸ್ಟ್ರಾಜೆನೆಕಾ ಘೋಷಿಸಿದೆ. ಇನ್ನು ಮಾರ್ಚ್ 5ರಂದೇ ಲಸಿಕೆ ಹಿಂಪಡೆಯಲು ಕಂಪನಿಯು ಅರ್ಜಿ ಸಲ್ಲಿಸಿತ್ತು. ಇದೀಗ ಮೇ 7 ರಿಂದ ಜಾರಿಗೆ ಬಂದಿದೆ ಎಂದು ತಿಳಿದುಬಂದಿದೆ.
 
				 
         
         
         
															 
                     
                     
                     
                    


































 
    
    
        