ಗೋವಾ: ಬಾಲಿವುಡ್ನ ಖ್ಯಾತ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಸೇವೆಯನ್ನು ಪರಿಗಣಿಸಿ ಗೋವಾದಲ್ಲಿ 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2023ರಲ್ಲಿ ವಿಶೇಷವಾಗಿ ಅವರನ್ನು ಗೌರವಿಸಲಾಗಿದೆ.
ನಾಲ್ಕು ದಶಕಗಳ ಕಾಲದಿಂದ ಸಿನಿಮಾ ರಂಗದಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಲಾಗಿದೆ. 1984ರಲ್ಲಿ ‘ಅಬೋಥ್’ ಚಲನಚಿತ್ರದೊಂದಿಗೆ ಮಾಧುರಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.


































