ಇಂದೋರ್ನ ಕೆಲವು ಯುವ ಕಾಲೇಜು ಹುಡುಗಿಯರು ಈಗ ಹುಡುಗರ ಗಡ್ಡದ ಬಗ್ಗೆ ರ್ಯಾಲಿಯನ್ನು ಆಯೋಜಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ‘ಗಡ್ಡವಿಲ್ಲದ ಗೆಳೆಯರು ಬೇಕು’ ಎಂದು ಯುವತಿಯರು ಈ ವಿನೂತನ ರ್ಯಾಲಿ ಆರಂಭಿಸಿದರು. ‘ಗಡ್ಡ ತೆಗೆಯಿರಿ, ಪ್ರೀತಿ ಉಳಿಸಿ’ ಎಂಬ ಘೋಷಣೆಯೊಂದಿಗೆ ಯುವತಿಯರು ಮುಖಕ್ಕೆ ಗಡ್ಡ ಮೇಕಪ್ ಹಾಕಿಕೊಂಡು ರ್ಯಾಲಿ ನಡೆಸಿದರು.
https://x.com/UmArshaikh7379/status/1847148666840043526?ref_src=twsrc%5Etfw%7Ctwcamp%5Etweetembed%7Ctwterm%5E1847148666840043526%7Ctwgr%5Eaad88fe74bca9e3d0fca6686700f1d61c628eb40%7Ctwcon%5Es1_&ref_url=https%3A%2F%2Fjanaspandhan.com%2Fyoung-women-protested-they-wanted-a-boyfriend-without-a-beard-video-viral%2F
ಕೃತಕ ಗಡ್ಡವನ್ನು ಧರಿಸಿರುವ ಕೆಲವು ಹುಡುಗಿಯರು ನಗರದ ಬೀದಿಗಳಲ್ಲಿ ಗಡ್ಡಕ್ಕೆ ವಿರೋಧ ವ್ಯಕ್ತಪಡಿಸುತ್ತಾ ರ್ಯಾಲಿ ನಡೆಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಕೆಲ ಹುಡುಗಿಯರು ಕೈಯಲ್ಲಿ ವಿಚಿತ್ರ ಬರಹವುಳ್ಳ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹುಡುಗಿಯರು ಕ್ಲೀನ್ ಶೇವ್ ಬಾಯ್ಫ್ರೆಂಡ್ಗಾಗಿ ರ್ಯಾಲಿ ಮಾಡುತ್ತಿದ್ದಾರೆ. ಅದೇ ಬರಹವಿರುವ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಹುಡುಗಿಯರ ಈ ಪ್ರತಿಭಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಹುಡುಗಿಯರು ಆಯೋಜಿಸಿದ ಈ ಪ್ರತಿಭಟನೆಯು ರೀಲ್ಸ್ಗಾಗಿ ಮಾಡಿದ್ದಾರಾ ಎಂಬ ವಿಚಾರ ಸ್ಪಷ್ಟವಾಗಿಲ್ಲ. ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.