ಸ್ಯಾಂಡಲ್‌ವುಡ್‌ನಲ್ಲಿ ಈಗ ಸದ್ದು ಮಾಡ್ತಿದ್ದಾನೆ ಗಬ್ರು..? ಗಬ್ರು ಅಂದ್ರೆ ಮತ್ಯಾರು ಅಲ್ಲ ಡಾಲಿ ಧನಂಜಯ. ಉತ್ತರಾಖಂಡ ಸಿನಿಮಾಗಾಗಿ ಧನಂಜಯ ಗಬ್ರು ಸತ್ಯನಾಗಿ ಬದಲಾಗಿದ್ದಾರೆ. ಉತ್ತರಕಾಂಡ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ಧನಂಜಯ ಹುಟ್ಟುಹಬ್ಬಕ್ಕೂ ಮೊದಲೇ ಗಬ್ರು ಲುಕ್ ರಿವೀಲ್ ಆಗುತ್ತಿದೆ. ಉತ್ತರಕಾಂಡ ಸಿನಿಮಾಗಾಗಿ ರಗಡ್ ಲುಕ್‌ನಲ್ಲಿ ಧನಂಜಯ ಕಾಣಿಸಿಕೊಳ್ತಿದ್ದಾರೆ. ಆಗಸ್ಟ್ 22ಕ್ಕೆ ಸಂಜೆ 5.55 ಕ್ಕೆ ಗಬ್ರು ರಿಲೀಸ್ ಆಗ್ತಿದೆ. ಆಗಸ್ಟ್ 23ಕ್ಕೆ ಧನಂಜಯ ಹುಟ್ಟುಹಬ್ಬ ಇರೋದರಿಂದ ಸ್ಪೆಷಲ್ ಆಗಿ ಗಬ್ರು ಪ್ರೇಕ್ಷಕರ ಮುಂದೆ ಎಂಟ್ರಿ ಕೊಡ್ತಿದ್ದಾನೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣದ ಸಿನಿಮಾ ಇದಾಗಿದ್ದು, ಡಾಲಿ, ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಮೂರನೇ ಬಾರಿ ಹ್ಯಾಟ್ರಿಕ್ ಬಾರಿಸಲು ಸಿದ್ದರಾಗ್ತಿದ್ದಾರೆ.