ಬೆಂಗಳೂರು : ಗ್ಯಾಸ್ ಸಿಲಿಂಡರ್ಗೆ ಕೆವೈಸಿ ಮಾಡದಿದ್ದರೆ, ಸಬ್ಸಿಡಿ ಪಡೆಯಲು ಸಾಧ್ಯವಾಗೋದಿಲ್ಲ. ಪ್ರಸ್ತುತ, ಕೆವೈಸಿಯನ್ನ ಎರಡು ರೀತಿಯಲ್ಲಿ ಮಾಡಬಹುದು. ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡುವ ಮೂಲಕ ನೀವು ವೈಸಿ ಮಾಡಬಹುದು. ಇದಲ್ಲದೆ, ಆನ್ಲೈನ್ ಕೆವೈಸಿ (Online LPG Cylender KYC) ಪಡೆಯುವ ಆಯ್ಕೆ ಲಭ್ಯವಿದೆ
ಆನ್ ಲೈನ್ KYC ಗಾಗಿ ಈ ಹಂತಗಳನ್ನು ಅನುಸರಿಸಿ.!
* ಆನ್ಲೈನ್ ಕೆವೈಸಿಗಾಗಿ ಅದರ ಅಧಿಕೃತ ವೆಬ್ಸೈಟ್ https://www.mylpg.in/ ಗೆ ಭೇಟಿ ನೀಡಿ.
* ವೆಬ್ಸೈಟ್ನ ಮುಖಪುಟದಲ್ಲಿ, ನೀವು ಎಚ್ಪಿ, ಇಂಡಿಯನ್ ಮತ್ತು ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ಸಿಲಿಂಡರ್ನ ಚಿತ್ರವನ್ನ ನೋಡುತ್ತೀರಿ.
* ನೀವು ಸಂಪರ್ಕ ಹೊಂದಿರುವ ಗ್ಯಾಸ್ ಕಂಪನಿಯ ಸಿಲಿಂಡರ್’ನ ಚಿತ್ರದ ಮೇಲೆ ಕ್ಲಿಕ್ ಮಾಡಿ
* ಕೆವೈಸಿ ಆಯ್ಕೆಯು ಸಂಬಂಧಪಟ್ಟ ಗ್ಯಾಸ್ ಕಂಪನಿಯ ವೆಬ್ಸೈಟ್ನಲ್ಲಿ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ನಿಮ್ಮನ್ನು ಮೊಬೈಲ್ ಸಂಖ್ಯೆ, ಗ್ರಾಹಕ ಸಂಖ್ಯೆ ಮತ್ತು ಎಲ್ಪಿಜಿ ಐಡಿ ಬಗ್ಗೆ ಮಾಹಿತಿಯನ್ನ ಕೇಳಲಾಗುತ್ತದೆ. ನೀವು ಈ ಮಾಹಿತಿಗಳಲ್ಲಿ ಒಂದನ್ನ ಒದಗಿಸಬೇಕಾಗುತ್ತದೆ.
* ಇದರ ನಂತರ, ಆಧಾರ್ ಪರಿಶೀಲನೆಯನ್ನ ಕೇಳಲಾಗುತ್ತದೆ ಮತ್ತು ಒಟಿಪಿ ಜನರೇಟ್ ಆಯ್ಕೆ ಬರುತ್ತದೆ ಮತ್ತು ಒಟಿಪಿ ರಚಿಸಿದ ನಂತರ ಹೊಸ ಪುಟ ತೆರೆಯುತ್ತದೆ
* ಈ ಪುಟದ ನಂತರ, ಕಂಪನಿಯು ಕೇಳಿದ ಮಾಹಿತಿಯನ್ನು ನೀಡಬೇಕಾಗುತ್ತದೆ ಮತ್ತು ನಿಮ್ಮ ಕೆವೈಸಿ ನವೀಕರಣ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.