ನೈನಿತಾಲ್: ಚಾಲಕನ ಅವಾಂತರಕ್ಕೆ ಖಾಸಗಿ ಬಸ್ ನದಿಗೆ ಉರುಳಿದೆ. ನೀರು ಆಳ ಇಲ್ಲದ ಕಾರಣ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉತ್ತರಾಖಂಡದ ನೈನಿತಾಲ್‌ನಲ್ಲಿ ಘಟನೆ ನಡೆದಿದೆ. ವಿಡಿಯೋದಲ್ಲಿ, ತುಂಬಿ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಿರುವ ರಸ್ತೆಯ ಮೇಲೆ ದಡ ಸೇರಲು ಹಾದು ಬರುತ್ತಿದ್ದ ಬಸ್ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಕೂಡಲೇ ಸ್ಥಳೀಯರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಮುಂದಾಗಿದ್ದಾರೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಲು ಬಸ್‌ನ ಕಿಟಕಿಯಿಂದ ಹೊರಬರುತ್ತಿರುವುದು ದೃಶ್ಯದಲ್ಲಿದೆ. ನದಿ ರಭಸದಿಂದ ಹರಿಯುತ್ತಿದ್ದರೂ ಚಾಲಕ ಬಸ್ ಚಲಾಯಿಸಿದ್ದಾನೆ. ಇದು ಬಸ್ ನದಿಗೆ ಉರುಳಲು ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಭಾರತದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ, ಉತ್ತರಾಖಂಡ, ಉತ್ತರ ಉತ್ತರ ಪ್ರದೇಶ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಮತ್ತು ಸಿಕ್ಕಿಂ ಸೇರಿದಂತೆ ಹಿಮಾಲಯದ ತಪ್ಪಲಿನಲ್ಲಿ, ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಪ್ರತ್ಯೇಕವಾದ ಭಾರೀ ಮತ್ತು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈಶಾನ್ಯ ಭಾರತದಾದ್ಯಂತ, ಮುಂದಿನ ಐದು ದಿನಗಳಲ್ಲಿ ಮಳೆಯು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
[vc_row][vc_column]
BREAKING NEWS
- ಹತ್ತೇ ನಿಮಿಷದಲ್ಲಿ ಬ್ಯಾಂಕ್ ನಿಂದ 18.85 ಕೋಟಿ ರೂ. ದರೋಡೆ.!
- ಬೆಂಗಳೂರಿನ 7ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
- ಗ್ರಾಹಕರಿಗೆ ಶಾಕ್ : ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ
- ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರೆಳಿದ ಮೋದಿ – ಅದ್ದೂರಿ ಸ್ವಾಗತ
- ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ ಸುಖಾಂತ್ಯ: ಅಪಹರಣಕಾರರ ಬಂಧನ
- ಭ್ರೂಣ ಹತ್ಯೆ ಪ್ರಕರಣ- ಸಿಐಡಿ ತನಿಖೆಗೆ ಒಪ್ಪಿಸಿದ ಸಿಎಂ
- ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ
- ಏರ್ ಇಂಡಿಯಾ ವಿಮಾನದೊಳಗೆ ನೀರು ಸೋರಿಕೆ- ಪ್ರಯಾಣಿಕರ ಪರದಾಟ
- ದ್ವಿತೀಯ ಪಿಯುಸಿ ಪಾಸಾದವರು ಅರಣ್ಯ ಇಲಾಖೆಯ 540 ರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.!
- ರಾಜ್ಯದ ಮುಖ್ಯ ಕಾರ್ಯದರ್ಶಿ ಅಜನೀಶ್ ಗೋಯೆಲ್.!