ಚಿಕ್ಕಮಗಳೂರು: ಸ್ನೇಹಿತರೊಂದಿಗೆ ರಾತ್ರಿ ವೇಳೆ ಶಿಕಾರಿಗೆ ಹೋಗಿದ್ದಾಗ ಮಿಸ್ ಫೈರಿಂಗ್ನಿಂದಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದ ನಿವಾಸಿ 35 ವರ್ಷದ ಸಂಜಯ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಸಂಜಯ್ ತನ್ನ ಸ್ನೇಹಿತರಾದ ನಿಸರ್ಗ, ಸುಮನ್ ಜೊತೆಗೆ ತಡರಾತ್ರಿ ಶಿಕಾರಿಗೆ ತೆರಳಿದ್ದ.
ಈ ವೇಳೆ ಚಿಕ್ಕಮಗಳೂರು ತಾಲೂಕಿನ ಉಳುವಾಗಿಲು ಸಮೀಪ ರಸ್ತೆಯಲ್ಲಿ ಕೋವಿಯೊಂದಿಗೆ ನಿಂತಿದ್ದ ವೇಳೆ ಸಂಜಯ್ಗೆ ಗುಂಡು ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಜಯ್ ಸ್ನೇಹಿತರಾದ ನಿಸರ್ಗ ಮತ್ತು ಸುಮನ್ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
































