ಚಿತ್ರದುರ್ಗ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಏPಖಿಅಐ) ವತಿಯಿಂದ ಹೊಸದಾಗಿ ನಿರ್ಮಿಸಲಾದ 66/11 ಕೆವಿ ತೇಕಲವಟ್ಟಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಚಿತ್ರದುರ್ಗ-ಹಿರಿಯೂರು ಮಾರ್ಗದಿಂದ ಸುಮಾರು 14.132 ಕಿ.ಮೀ ಉದ್ದದ ಈ 66 ಕೆವಿ ಜೋಡಿ ಮಾರ್ಗವು ಜನವರಿ 30, 2026 ರಂದು ಅಥವಾ ನಂತರ ಯಾವುದೇ ಸಮಯದಲ್ಲಿ ಚಾಲನೆಗೊಳ್ಳಲಿದೆ.
ಚಾಲನೆಗೊಂಡ ವಿದ್ಯುತ್ ಮಾರ್ಗ ಹೊಳಲ್ಕೆರೆ ಮತ್ತು ಹಿರಿಯೂರು ತಾಲ್ಲೂಕಿನ ತೇಕಲವಟ್ಟಿ, ಯರೇಹಳ್ಳಿ, ಕೌಳಾಳು, ಬುರುಜನರೊಪ್ಪ, ಮರಡಿದೇವಿಗಿರೆ, ಭರಂಪುರ, ಕುಂಬಾರಘಟ್ಟ ಮತ್ತು ಯಲಕುರನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಹಾದುಹೋಗಲಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್ ಗೋಪುರಗಳನ್ನು (ಖಿoತಿeಡಿs) ಹತ್ತುವುದು ಅಥವಾ ಮುಟ್ಟುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಾರ್ಗದ ಮೇಲೆ ಮರದ ಕೊಂಬೆಗಳು, ಲೋಹದ ತಂತಿ ಅಥವಾ ಇತರ ಯಾವುದೇ ವಸ್ತುಗಳನ್ನು ಎಸೆಯಬಾರದು. ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ. ಮಾರ್ಗದ ಅಡಿಯಲ್ಲಿರುವ ಅಪಾಯಕಾರಿ ಮರಗಳನ್ನು ಭೂಮಾಲೀಕರು ಕೂಡಲೇ ತೆರವುಗೊಳಿಸಬೇಕು.
ಈ ಎಚ್ಚರಿಕೆಗಳನ್ನು ಉಲ್ಲಂಘಿಸಿ ನಡೆಯುವ ಯಾವುದೇ ಅನಾಹುತ ಅಥವಾ ಅಪಘಾತಗಳಿಗೆ ಕೆಪಿಟಿಸಿಎಲ್ ನಿಗಮವು ಜವಾಬ್ದಾರಿಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.































