ನವದೆಹಲಿ:ಚೆನ್ನೈ -ಬೆಂಗಳೂರು ಗ್ರೀನ್ ಪೀಲ್ಡ್ ಎಕ್ಸ್ಪ್ರೆಸ್ ವೇ ಪ್ರಸಕ್ತ ಸಾಲಿನಲ್ಲೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ಅವರು, ಆಯಾ ಸರ್ಕಾರಗಳು ನಿರ್ಮಾಣ ಸಾಮಾಗ್ರಿಗಳನ್ನು ಲಭ್ಯವಾಗುವಂತೆ ಮಾಡಲು ಭಾರತೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೆರವಾಗುವಂತೆ ಈ ವೇಳೆ ಅವರು ಆಗ್ರಹಿಸಿದರು.
ಡಿಸೆಂಬರ್‌ಗೂ ಮೊದಲು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಪಯತ್ನಿಸುತ್ತಿದ್ದೇವೆ ಎಂದು ನಾನು ಈ ಸದನಕ್ಕೆ ಭರವಸೆ ನೀಡುತ್ತೇನೆ. ಈ ರಸ್ತೆ ನಿರ್ಮಾಣ ಮೂಲಕ ಚೆನ್ನೈ – ಬೆಂಗಳೂರು ನಡುವಣ ಅಂತರವನ್ನು ಕೇವಲ ಎರಡು ಗಂಟೆಗಳಲ್ಲಿ ಕ್ರಮಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹೆದ್ದಾರಿ ನಿರ್ಮಾಣದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ .ಕೆ. ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.