ಮೈಸೂರು: ಮೈಸೂರು ದಸರಾದ ಬಹುಮುಖ್ಯ ಕಾರ್ಯಕ್ರಮ ಜಂಬೂ ಸವಾರಿಯಲ್ಲಿ ಸತತವಾಗಿ 22 ವರ್ಷಗಳ ಕಾಲ ನಿಶಾನೆಯಾಗಿ ಭಾಗವಹಿಸಿದ್ದ ಸಾಕಾನೆ ಅರ್ಜುನ(64) ಇಂದು ಕೊನೆಯುಸಿರೆಳೆದಿದೆ.
ಕಾಡಾನೆಯನ್ನು ಹಿಡಿಯಲೆಂದು ಅರಣ್ಯಕ್ಕೆ ಕಾರ್ಯಾಚರಣೆಗೆ ತೆರಳಿದ್ದ ವೇಳೆ ಕಾಡಾನೆಯು ಅರ್ಜುನ ಆನೆ ಮೇಲೆ ತೀವ್ರವಾಗಿ ಹಲ್ಲೆ ಮಾಡಿತ್ತು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆಯು ಹಾಸನ ಜಿಲ್ಲೆಯ ಸಕಲೇಶಪುರದ ಯಳಸೂರಿನ ಬಳಿ ನಡೆದಿದೆ.