ನಮೀಬಿಯಾದಲ್ಲಿ ಬರ ತಾಂಡವವಾಡುತ್ತಿದೆ. ತಿನ್ನಲು ಅನ್ನ, ಕುಡಿಯಲು ನೀರಿಲ್ಲದೆ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಕಳೆದ 100 ವರ್ಷಗಳಲ್ಲಿ ದೇಶವು ಭೀಕರ ಬರ ಎದುರಿಸುತ್ತಿದೆ. ಜನರ ಹಸಿವು ನೀಗಿಸಲು ನಮೀಬಿಯಾ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಹೌದು ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ಹಲವು ದೇಶಗಳಲ್ಲಿ ವ್ಯಾಪಕ ಬರದಿಂದಾಗಿ ತಿನ್ನಲು ಅನ್ನ ಆಹಾರವಿಲ್ಲದೇ ಜನ ಹಸಿವೆಯಿಂದ ಸಾಯುವ ಸ್ಥಿತಿ ತಲುಪಿದ ಕಾರಣ ಹಸಿವು ನೀಗಿಸಲು ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ದೇಶಗಳ ಸರ್ಕಾರವೂ ಆನೆ, ಘೇಂಡಾಮೃಗ ಸೇರಿದಂತೆ ಕಾಡುಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಮಾಂಸದಿಂದ ಜನರ ಹೊಟ್ಟೆ ತುಂಬಿಸಲು ಮುಂದಾಗಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕಳೆದ 100 ವರ್ಷಗಳಲ್ಲೇ ಕಂಡು ಕೇಳರಿಯದ ಬರಗಾಲಕ್ಕೆ ಆಫ್ರಿಕಾದ ನಮೀಬಿಯಾ ತುತ್ತಾಗಿದೆ. ಇದರಿಂದ ಬೆಳೆ ಬೆಳೆಯಲಾಗದೇ ತಿನ್ನಲು ಆಹಾರವಿಲ್ಲದೇ ಜನ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಜನರ ಜೀವ ಉಳಿಸುವುದಕ್ಕಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಅಂದಾಜು 100 ಪ್ರಾಣಿಗಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದೆ. ನಮೀಬಿಯಾದ ಪರಿಸರ ಸಚಿವಾಲಯ ಹಾಗೂ ಅರಣ್ಯ ಹಾಗೂ ಪ್ರವಾಸೋದ್ಯಮ ಸಚಿವಾಲಯವೂ ಈ ವಾರದ ಆರಂಭದಲ್ಲೇ ಈ ವಿಚಾರದ ಬಗ್ಗೆ ಘೋಷಣೆ ಮಾಡಿದೆ. ನೀರು ಆಹಾರವಿಲ್ಲದೇ ಕಂಗಾಲಾಗಿರುವ ಜನರ ಹೊಟ್ಟೆ ತುಂಬಿಸಲು ಒಟ್ಟು 723 ಪ್ರಾಣಿಗಳ ಹತ್ಯೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಪಟ್ಟಿಯಲ್ಲಿ 30 ಘೇಂಡಾಮೃಗಗಳು, 60 ಎಮ್ಮೆಗಳು, 50 ಜಿಂಕೆಗಳು 100 ನೀಲಿ ಹೇಸರಗತ್ತೆ 300 ಜೀಬ್ರಾಗಳು ಹಾಗೂ 83 ಆನೆಗಳು ಹಾಗೂ 100 ಕಾಡುಕೋಣಗಳು ಸೇರಿವೆ. ಕಾಡುಪ್ರಾಣಿಗಳ ಹತ್ಯೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಈ ಘೋಷಣೆ ಮಾಡುತ್ತಿರುವುದಾಗಿ ಸಚಿವಾಲಯವೂ ಹೇಳಿದೆ. ಹೀಗೆ ಹತ್ಯೆ ಮಾಡುವ ಪ್ರಾಣಿಗಳನ್ನು ರಾಷ್ಟ್ರೀಯ ಉದ್ಯಾನವನಗಳಿಂದ ಹಾಗೂ ಪ್ರಾಣಿಗಳ ಸಂಖ್ಯೆಗಳು ಹೆಚ್ಚು ಕಡಿಮೆ ಆಗದಂತೆ ಹೇರಳವಾಗಿ ಪ್ರಾಣಿಗಳನ್ನು ಹೊಂದಿರುವ ಪ್ರದೇಶದಿಂದ ಹಿಡಿದು ತಂದು ಹತ್ಯೆ ಮಾಡಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಮೀಬಿಯಾದ ನಾಗರಿಕರ ಅನುಕೂಲಕ್ಕಾಗಿ ಬಳಸಲಾಗುತ್ತದೆ, ಇದು ನಮ್ಮ ಸಂವಿಧಾನಿಕ ಆದೇಶಕ್ಕೆ ಅನುಗುಣವಾಗಿದೆ ಹಾಗೂ ಈ ಪ್ರಕ್ರಿಯೆಯೂ ತುಂಬಾ ಅಗತ್ಯವಾಗಿದೆ ಎಂದು ನಮೀಬಿಯಾದ ಸಚಿವಾಲಯವೂ ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ 2023ರಿಂದಲೂ ತೀವ್ರ ಬರವಿದೆ. ಏರಿಕೆಯಾಗುತ್ತಿರುವ ತೀವ್ರ ತಾಪಮಾನದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ, ಇಲ್ಲಿ ಫೆಬ್ರವರಿ ತಿಂಗಳಲ್ಲಿ ಮಳೆಗಾಲವಿದ್ದು, ಈ ಬಾರಿ ವಾರ್ಷಿಕವಾಗಿ ಬರುವ ಮಳೆಯ ಶೇ.20ರಷ್ಟು ಮಾತ್ರ ಮಳೆಯಾಗಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.