ಬೆಂಗಳೂರು: ತಮ್ಮ ಆಪ್ತ ವಲಯದಲ್ಲಿರುವ ಕೆಲವರ ಜೊತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ತಡರಾತ್ರಿ, ತಮ್ಮ ಮಗನ ಜತೆ ಪ್ರಯಾಣ ಬೆಳೆಸಿದ್ದಾರೆ ಎಂದು ಜಾರಕಿಹೊಳಿ ಅವರ ಆಪ್ತ ಮೂಲಗಳು ತಿಳಿಸಿವೆ.
ದಸರಾ ಸಂದರ್ಭದಲ್ಲಿ ಕೆಲವು ಶಾಸಕರ ಜೊತೆ ಮೈಸೂರಿಗೆ ತೆರಳಲು ಸತೀಶ ಜಾರಕಿಹೊಳಿ ಮುಂದಾಗಿದ್ದರು. ಆದರೆ, ಈ ರೀತಿ ಗುಂಪುಕಟ್ಟಿಕೊಂಡು ಹೋಗುವುದರಿಂದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆಯಾಗಿ, ವಿರೋಧ ಪಕ್ಷಗಳಿಗೆ ಅಸ್ತ್ರ ಆಗಬಹುದೆಂದು ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದ್ದ ಕಾರಣ ಅವರು ಆ ಪ್ರವಾಸದಿಂದ ಹಿಂದೆ ಸರಿದಿದ್ದರು.