Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಜಿಮ್​ನ ಮೇಲ್ಛಾವಣಿ ಕುಸಿದು, 10 ಮಂದಿ ಸಾವು

0

ಚೀನಾ : ಜಿಮ್​ನ ಮೇಲ್ಛಾವಣಿ ಕುಸಿದು 10 ಮಂದಿ ಮೃತಪಟ್ಟಿದ್ದು, ಓರ್ವ ಸಿಲುಕಿರುವ ಕುರಿತು ವರದಿಯಾಗಿದೆ. ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಕಿಕಿಹಾರ್‌ನಲ್ಲಿರುವ ನಂ. 34 ಮಿಡಲ್ ಸ್ಕೂಲ್‌ನಲ್ಲಿರುವ ಜಿಮ್​ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮೇಲ್ಛಾವಣಿ ಕುಸಿದಿದೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಸೋಮವಾರ ನಸುಕಿನ ಜಾವ 5.30ರಷ್ಟೊತ್ತಿಗೆ 14 ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಜಿಮ್​ನ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಅವಶೇಷಗಳಿಂದ ಜನರನ್ನು ಹೊರತೆಗೆಯುತ್ತಿರುವುದನ್ನು ಕಾಣಬಹುದು. ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಮತ್ತು 39 ಅಗ್ನಿಶಾಮಕ ಟ್ರಕ್‌ಗಳನ್ನು ಒಳಗೊಂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

Leave A Reply

Your email address will not be published.