ನವದೆಹಲಿ: ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಜಿ20 ಶೃಂಗಸಭೆಯ ಹಿನ್ನೆಲೆ ಭಾರತಕ್ಕೆ ಆಗಮಿಸಿದ್ದು, ಅವರ ಬೆಂಗಾವಲು ವಾಹನ ಪಡೆಯ ಚಾಲಕನೊಬ್ಬ ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿದ್ದರಿಂದಾಗಿ ದೆಹಲಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
G-20 ಶೃಂಗಸಭೆ ಹಿನ್ನೆಲೆಯಲ್ಲಿ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ತಂಗಿದ್ದ ತಾಜ್ ಹೋಟೆಲ್‌ಗೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ಕಾರು ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ.
ಇನ್ನು ವಾಹನ ಚಾಲನೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದಾಗಿ ಚಾಲಕನನ್ನ ವಶಕ್ಕೆ ಪಡೆಯಲಾಗಿದ್ದು,. ವಿಚಾರಣೆಯ ನಂತರ ಆತನನ್ನ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.