ಚೆನ್ನೈ:ತಮಿಳಿನ ಖ್ಯಾತ ನಟ ನಿರ್ದೇಶಕ ಮಾರಿಮುತ್ತು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.’ಜೈಲರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಿರ್ದೇಶಕ ಹಾಗೂ ನಟ ಮರಿಮುತ್ತು ಅವರು ಡಬ್ಬಿಂಗ್ ವೇಳೆ ಇಂದು ಬೆಳಗ್ಗೆ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಟ ಹಾಗೂ ನಿರ್ದೇಶಕ ಮರಿಮುತ್ತು ಅವರ ಹಠಾತ್ ನಿಧನ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಕಂಬನಿ ಮಿಡಿದಿದೆ. ರಜನಿಕಾಂತ್ ಅವರ ಇತ್ತೀಚೆಗೆ ಬಿಡುಗಡೆಯಾದ ಜೈಲರ್ ಚಿತ್ರ, ಅವರು ಖಳನಾಯಕ ವಿನಾಯಕ್ ಅವರ ಬಲಗೈ ಬಂಟನಾಗಿ ನಟಿಸಿದ್ದಾರೆ. ಕಿರುತೆರೆಯ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿದ್ದ ಮಾರಿಮುತ್ತು ಅವರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಡೀ ತಮಿಳು ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ಆಘಾತವನ್ನುಂಟು ಮಾಡಿದೆ.