ಬೆಂಗಳೂರು: ರೌಡಿ ಶೀಟರ್ ಜೊತೆಗೆ ನಟ ದರ್ಶನ್ ಜೈಲಿನಲ್ಲಿ ವಿಡಿಯೋ ಕಾಲ್ ಮಾಡಿದ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನವಾಗಿದೆ. ಪ್ರಕರಣ ಆಳ ಅಗಲಕ್ಕಿಳಿದ ಖಾಕಿ ವಿಡಿಯೋ ಕಾಲ್ ಪ್ರಕರಣದಲ್ಲಿ ದರ್ಶನ್‌ಗೆ ರಿಲಿಫ್ ಸಿಗೋ ಸಾಧ್ಯತೆಯಿದೆ. ದರ್ಶನ್ ಮೊಬೈಲ್ ಯೂಸ್ ಮಾಡಿಲ್ಲ. ಆದ್ರೆ ರೌಡಿಶೀಟರ್ ಧರ್ಮ ತನ್ನ ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿ ದರ್ಶನ್ ತೋರಿಸಿದ್ದನಂತೆ. ಇನ್ನು ರೌಡಿ ಶೀಟರ್ ಧರ್ಮನಿಗೆ ಮೊಬೈಲ್ ಹಾಗೂ ಸಿಮ್‌ನ ಕೊಟ್ಟವರು ಯಾರು ಅನ್ನೋದನ್ನು ಪತ್ತೆ ಮಾಡಿರುವ ಪೊಲೀಸರು ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಕಂಪನಿಯ ಚಾಲಕ ಯಾದವ್ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದ ಮಣಿವಣ್ಣನ್ ಬಟ್ಟೆಯಲ್ಲಿ ಅಡಗಿಸಿ ಜೈಲಿಗೆ ಕಳುಹಿಸಿದ್ನಂತೆ. ಇನ್ನು ಇದಕ್ಕೂ ಮೊದಲು ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್ ಸಪ್ಲೈ ಮಾಡಿದ್ದಾನೆ. ಧರ್ಮನಿಗಾಗಿ ಒನ್ ಪ್ಲಸ್ ಮೊಬೈನ್ ಮೆಜೆಸ್ಟಿಕ್‌ನ ಸೆಕೆಂಡ್ ಮಾರ್ಕೇಟ್ ಖರೀದಿ ಮಾಡಲಾಗಿದೆ. ಮೊಬೈಲ್ ಖರೀದಿಗೂ ಮುನ್ನ ಮೊಬೈಲ್ ಫೋಟೋ ಕಳುಹಿಸಿದ್ದ ಶಾಪ್ ಓನರ್ ಮೊಬೈಲ್‌ನಿಂದ ಸಾಕ್ಷಗಳನ್ನ ಪೊಲೀಸ್ರು ಕಲೆ ಹಾಕಿದ್ದಾರೆ. ಎರಡು ಮೊಬೈಲ್ ಫೋಟೋ ಕಳುಹಿಸಿ ಒಂದು ಮೊಬೈಲ್ ಸೆಲೆಕ್ಟ್ ಮಾಡುವಂತೆ ಹೇಳಿದ್ನಂತೆ ಶಾಪ್ ಮಾಲೀಕ. ಸದ್ಯ ಮೊಬೈಲ್ ಅಂಗಡಿ ಮಾಲೀಕನನ್ನ ವಿಚಾರಣೆ ನಡೆಸಲು ಪೊಲೀಸ್ರು ಮುಂದಾಗಿದ್ದಾರೆ. ಟ್ರಾವೆಲ್ ಮಾಲೀಕ ಮಣಿವಣ್ಣನ್ ಬಂಧಿಸಿ ಠಾಣ ಜಾಮೀನಿನ ಮೇಲೆ ರಿಲೀಸ್ ಮಾಡಲಾಗಿದೆ. ಇನ್ನು ವಿಡಿಯೋ ವೈರಲ್ ಆಗ್ತಿದ್ದಂತೆ ಧರ್ಮ ಮೊಬೈಲ್ ಮತ್ತು ಸಿಮ್‌ನ ಜಜ್ಜಿ ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿದ್ನಂತೆ. ಇನ್ನು ಅಂತಿಮ ವರದಿಯನ್ನ ತಯಾರು ಮಾಡಿದ್ದು ಕೆಲ ದಿನಗಳಲ್ಲೆ ನ್ಯಾಯಲಯಕ್ಕೆ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
