ಬೆಂಗಳೂರು: ಕೆಲ ವರ್ಷಗಳಿಂದ ಮುನಿಸಿಕೊಂಡಿದ್ದ ತಾಯಿ ಮಗ ಜೈಲಲ್ಲಿ ಒಂದಾಗಿದ್ದಾರೆ. ಜೈಲಿನಲ್ಲಿ ದರ್ಶನ್‌ನ ತಾಯಿ ಮೀನಾ ತೂಗುದೀಪ ಹಾಗೂ ಸಹೋದರ ದಿನಕರ್ ಭೇಟಿ ಮಾಡಿದ್ದಾರೆ. ಜೈಲಿನಲ್ಲಿ ಮಗನ ಸ್ಥಿತಿ ಕಂಡು ಬಿಕ್ಕಳಿಸಿ ಅತ್ತ ತಾಯಿ ಮೀನಾ ಮಗನ್ನು ನೋಡ್ತಿದ್ದಂತೆ ಯಾಕೋ ಇಷ್ಟು ಸಣ್ಣ ಆಗಿದ್ಯಾ? ಕೋಪ ಕಮ್ಮಿ ಮಾಡಿಕೊಳ್ಳೋ ಅಂತ ಮಗನ್ನ ತಬ್ಬಿ ತಾಯಿ ದರ್ಶನ್‌ಗೆ ಮುತ್ತಿಟ್ಟಿದ್ದಾರೆ. ತಾಯಿ ಅತ್ತಿದ್ದು ನೋಡಿ ನೀನು ಯಾಕಮ್ಮ ಬರೋಕೆ ಹೋದೆ? ಎಂದು ನಟ ದರ್ಶನ್ ಕಣ್ಣೀರು ಹಾಕುತ್ತಾ ತಾಯಿಯನ್ನ ತಬ್ಬಿಕೊಂಡರು. ಆಗ ಅವರ ತಾಯಿ, ಯಾಕೊ ಮಗನೆ ಇಷ್ಟೊಂದು ಸಣ್ಣಗಾಗಿದ್ಯಾ ಅಂತಾ ಕೇಳಿದ್ದಕ್ಕೆ ಜೈಲೂಟ ಸೈರ್ತಿಲ್ಲ ಡಯಟ್ ನಲ್ಲಿದ್ದೀನಿ ಅಮ್ಮಾ ಅಂತ ಹೇಳಿದ್ರಂತೆ. ಯಾಕೊ ಇಂಥಾ ದುಸ್ಥಿತಿ ತಂದುಕೊಂಡೆ ಅಂತ ತಾಯಿ ಕೇಳ್ತಿದ್ದಂತೆ, ಅದೆಲ್ಲಾ ಬಿಡಮ್ಮ ಎಂದು ತಾಯಿಯನ್ನ ಸಂತೈಸಿದ ದರ್ಶನ್, ಸಹೋದರ ದಿನಕರ್ ತೂಗುದೀಪ್ ರನ್ನ ತಬ್ಬಿ ಮಾತಾಡಿಸಿದ್ದಾರೆ. ಅಣ್ಣನ ಸ್ಥಿತಿ ಕಂಡು ದಿನಕರ್ ಸಹ ಕಣ್ಣೀರಾಕಿದ್ದಾರಂತೆ.
