ದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ‘ಮೈ ಅಟಲ್ ಹೂಂ’ ಇದೇ ತಿಂಗಳು 19 ರಂದು ತೆರೆಗೆ ಬರಲು ಸಿದ್ಧವಾಗಿದೆ.
ವಾಜಪೇಯಿ ಅವರ ಪಾತ್ರದಲ್ಲಿ ಅಭಿನಯಿಸಿರುವ ನಟ ಪಂಕಜ್ ತ್ರಿಪಾಠಿ ಮಾತನಾಡಿ, ‘ನನಗೆ ಸಿಕ್ಕ ಅವಕಾಶಕ್ಕೆ ನಾನು ನ್ಯಾಯ ನೀಡಿದ್ದೇನೋ, ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕಡೆಯಿಂದ 100% ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎಂದು ಹೇಳಿದ್ದಾರೆ.
				
															
                    
                    
                    
                    
































