ಹಾಂಗ್ ಕಾಂಗ್: ಟ್ರಕ್ ಚಲಾಯಿಸುತ್ತಿದ್ದ ವೇಳೆ ಕೆಳಗೆ ಬಿದ್ದ ವ್ಯಕ್ತಿ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಜೋರ್ಡಾನ್ ಪ್ರಜೆ ಮೃತಪಟ್ಟಿದ್ದು, ಮೃತರ ಹೆಸರು ತಿಳಿದುಬಂದಿಲ್ಲ. ಮೃತ ವ್ಯಕ್ತಿ ಟವ್ ಟ್ರಕ್ ಅನ್ನು ಚಲಾಯಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮೃತ ವ್ಯಕ್ತಿ ಗ್ರೌಂಡ್ ಸಪೋರ್ಟ್ ಮತ್ತು ನಿರ್ವಹಣಾ ಸಂಸ್ಥೆ ಚೀನಾ ಏರ್ ಕ್ರಾಫ್ಟ್ ಸರ್ವಿಸಸ್ ನಲ್ಲಿ ಉದ್ಯೋಗಿಯಾಗಿರುತ್ತಾನೆ. ಈತ ಟ್ರಕ್ ಚಲಾಯಿಸುವಾಗ ಸೀಟ್ ಬೆಲ್ಟ್ ಹಾಕಿರಲಿಲ್ಲ. ಆದ್ದರಿಂದ ಟ್ರಕ್ ಚಲಾಯಿಸುವಾಗ ಕೆಳಗೆ ಬಿದ್ದಿದ್ದಾರೆ. ಪರಿಣಾಮ ವಿಮಾನ ಡಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ ಎಂದು ಹಾಂಗ್ ಕಾಂಗ್‌ನ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.