ನವದೆಹಲಿ : ವಿಶ್ವದ ನಂ 1 ಶ್ರೀಮಂತ ಟ್ವಿಟರ್ ಮಾಲೀಕ ಎಲನ್ ಮಸ್ಕ್ (ಜುಲೈ 23) ರಂದು ಟ್ವಿಟರ್ ಜಾಲತಾಣ ವೇದಿಕೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಟ್ವಿಟರ್ ಲೋಗೋ ಬದಲಾಯಿಸಿ, ಟ್ವಿಟರ್ ಬರ್ಡ್ಗೆ ವಿದಾಯ ಹೇಳುವ ಮೂಲಕ ಇಡೀ ವೇದಿಕೆಯನ್ನು ರೀಬ್ರ್ಯಾಂಡ್ ಮಾಡಲು ಸಜ್ಜಾಗಿದ್ದಾರೆ. ಟ್ವಿಟರ್ ಬರ್ಡ್ ಬದಲು ಎಕ್ಷ್ (X) ಲೋಗೋ ಮೊರೆ ಹೋಗುವ ಸುಳಿವನ್ನು ವಿಡಿಯೋ ಮೂಲಕ ನೀಡಿದ್ದಾರೆ. ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ. ಉತ್ತಮವಾದ ಎಕ್ಷ್ ಲೋಗೋವನ್ನು ಪೋಸ್ಟ್ ಮಾಡಿದ್ದಲ್ಲಿ, ನಾಳೆಯಿಂದ ಅದೇ ಲೋಗೋದೊಂದಿಗೆ ಮುಂದುವರಿಯಲಿದ್ದೇವೆ ಎಂದು ಮಸ್ಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಮಸ್ಕ್ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಮಸ್ಕ್ ಅವರು ಕಳೆದ ವರ್ಷ ಟ್ವಿಟರ್ ಅನ್ನು ಖರೀದಿ ಮಾಡಿ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ಬಳಿಕ ಟ್ವಿಟರ್ ನಿರಂತರವಾಗಿ ತಾಂತ್ರಿಕ ವೈಫಲ್ಯವನ್ನು ಅನುಭವಿಸುತ್ತಿದೆ. ಜಾಹೀರಾತು ಆದಾಯವು ಸ್ಥಿರವಾಗಿ ಕ್ಷೀಣಿಸುತ್ತಿರುವಾಗ ಸಾಮಾಜಿಕ ಜಾಲತಾಣ ಕಂಪನಿಯು ತನ್ನ ವೇದಿಕೆಯನ್ನು ಪುನರುಜ್ಜೀವನಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಈಗಲೂ ಟ್ವಿಟರ್ ಕಂಪನಿ ಜಾಹೀರಾತಿಗೆ ಪರ್ಯಾಯವಾದ ವ್ಯಾಪಾರ ಮಾದರಿಗಳೊಂದಿಗೆ ಬರಲು ಪ್ರಯತ್ನಿಸುತ್ತಿದೆ. ಟ್ವಿಟರ್ ಬ್ಲ್ಯೂಟಿಕ್ ಸಬ್ಸ್ಕ್ರಿಪ್ಸನ್ ಪರಿಚಯಿಸಿದೆ. ತಿಂಗಳಿಗೆ 8 ಡಾಲರ್ ನೀಡಿ ಬ್ಲ್ಯೂಟಿಕ್ ಪಡೆಯುವ ವ್ಯವಸ್ಥೆ ಇದಾಗಿದೆ. ಈಗಾಗಲೇ ಹಲವರು ಈ ಸೇವೆ ಪಡೆಯುತ್ತಿದ್ದು, ಇದರಿಂದ ಟ್ವಿಟರ್ಗೆ ಕೊಂಚ ಹಣ ಬರುತ್ತಿದೆ.
[vc_row][vc_column]
BREAKING NEWS
- ನಿಯಮ ಉಲ್ಲಂಘನೆ ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಯುವತಿಯಿಂದ ಅವಾಜ್!
- ‘ಕಾವೇರಿ ನೆಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ’- ಸಿದ್ದರಾಮಯ್ಯ
- ಭಾರತೀಯ ವಾಯುಪಡೆಗೆ C-295 ಸರಕು ವಿಮಾನ ಸೇರ್ಪಡೆ
- ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಹೃದಯಾಘಾತದಿಂದ ಸಾವು
- ‘ಶಾಂತಿಯುತ ಹೋರಾಟಕ್ಕೆ ಸರ್ಕಾರ ಅಡಚಣೆ ಮಾಡಲ್ಲ’: ಡಿಕೆಶಿ
- ಕಾವೇರಿ ನೀರು ವಿವಾದ: ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡ
- ಇಂದು ಮೊದಲ ಬಾರಿಗೆ ಇಡೀ ರಾಜ್ಯದಾದ್ಯಂತ ಏಕ ಕಾಲಕ್ಕೆ “ಜನತಾ ದರ್ಶನ”
- ‘ನನ್ನ ವಿರುದ್ಧ ಹೈದರ್ಬಾದ್ನಲ್ಲಿ ಸ್ಪರ್ಧಿಸಿ ‘- ರಾಹುಲ್ಗೆ ಓವೈಸಿ ಸವಾಲು
- ಮರೆತೂ ಕೂಡ ಈ ಸಮಯದಲ್ಲಿ ಮನೆ ಕಸ ಗುಡಿಸಬೇಡಿ – ಪೊರಕೆಗೆ ಕಾಲಿನಿಂದ ತುಳಿಯೋದ್ರಿಂದ ಬರುತ್ತೆ ಈ ಸಮಸ್ಯೆ..!!
- ಚೀನಾದಲ್ಲಿ ಮತ್ತೊಂದು ಆತಂಕಕಾರಿ ಕೊರೋನಾ ವೈರಸ್ ಪತ್ತೆ: ವೈರಾಣುತಜ್ಞರಿಂದ ಅಪಾಯದ ಎಚ್ಚರಿಕೆ