ಡಾ. ಬಿ. ರಾಜಶೇಖರಪ್ಪ ನವರಿಗೆ “ಪ್ರೊ. ಶಿ.ಚೆ. ನಂದೀಮಠ ಪ್ರಶಸ್ತಿ”

WhatsApp
Telegram
Facebook
Twitter
LinkedIn

 

ಧಾರವಾಡ: ಧಾರವಾಡದಲ್ಲಿ ಈಚೆಗೆ ಜರುಗಿದಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಾಧಿವೇಶನದಲ್ಲಿ, ಚಿತ್ರದುರ್ಗದಶಾಸನ-ಸಂಶೋಧಕಡಾ. ಬಿ. ರಾಜಶೇಖರಪ್ಪನವರಿಗೆ “ಪ್ರೊ. ಶಿ.ಚೆ. ನಂದೀಮಠ ಶಾಸನ ಸಾಹಿತ್ಯ ಶ್ರೀ” ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಾಧ್ಯಾಪಕಡಾ. ಬಾಳೇಶ ಚಿನಗುಡಿಅವರು ಸ್ಥಾಪಿಸಿರುವ ಈ ಪ್ರಶಸ್ತಿ ರೂ. 5,000 ನಗದು, ಅಭಿನಂದನ ಪತ್ರ, ಸ್ಮರಣಿಕೆಗಳೊಂದಿಗೆ ಸನ್ಮಾನ ಪೂರ್ವಕವಾಗಿ ನೀಡಲಾಯಿತು.

ಪರಿಷತ್ತಿನಅಧ್ಯಕ್ಷರೂ ಶಾಸನ – ಸಂಶೋಧಕರೂಆದ ಶ್ರೀಮತಿ ಹನುಮಾಕ್ಷಿ ಗೋಗಿ, ಪರಿಷತ್ತಿನಉಪಾಧ್ಯಕ್ಷರೂ, ಇತಿಹಾಸ ಸಂಶೋಧಕರೂಆದಡಾ. ಶರಣಗೌಡ ಪಾಟೀಲರೂ ಮತ್ತುಜನತಾ ಶಿಕ್ಷಣ ಸಮಿಇಯಡಾ. ಅಜಿತ್‌ಪ್ರಸಾದ್‌ಅವರು ಈ ಮಾಹಿತಿಯನ್ನು ತಿಳಿಸಿರುತ್ತಾರೆ.

ಈ ಪ್ರಥಮ ಮಹಾಧೀವೇಶನದ ಸರ್ವಾಧ್ಯಕ್ಷತೆ ವಹಿಸಿದ್ದವರು ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು.   ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು, ರಾಷ್ಟಿçÃಯದೃಶ್ಯಕಲಾಅಕಾಡೆಮಿ ಮತ್ತುಜನತಾ ಶಿಕ್ಷಣ ಸಮಿತಿಜಂಟಿಯಾಗಿ ಆಯೋಜಿಸಿದ್ದ ಈ ಮಹಾಧಿವೇಶನ 2024ರ ಎಪ್ರಿಲ್ 29 ಮತ್ತು 30 ರಂದುಜರುಗಿತು.  ಶಾಸನಗಳನ್ನು ಕುರಿತುಆಹ್ವಾನಿತರಿಂದದತ್ತಿ ಉಪನ್ಯಾಸಗಳಲ್ಲದೆ, ಕೆಲವರುಆಸಕ್ತರು ಮತ್ತು ವಿದ್ಯಾರ್ಥಿಗಳು ಕೂಡಾ ಕೆಲವು ಸಂಪ್ರಬAಧಗಳನ್ನು ಮಂಡಿಸಿದರು.

ಪ್ರಶಸ್ತಿಯ ಹೆಸರಿನ ಪ್ರೊ. ಶಿ.ಚೆ. ನಂದೀಮಠಅವರು ಸಂಸ್ಕೃತ ವಿದ್ವಾಂಸರಿದ್ದರಲ್ಲದೆ, ಇಂಗ್ಲೆAಡಿನಲ್ಲಿ ವೀರಶೈವ – ಲಿಂಗಾಯತಧರ್ಮದ ಬಗ್ಗೆ ಸಂಶೋಧನ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದಿದ್ದವರು.  ಅಷ್ಟೇ ಅಲ್ಲ, ಡಾ. ಡಿ.ಸಿ. ಪಾವಟೆಯವರ ಸಮಕಾಲೀನರಾಗಿದ್ದರಲ್ಲದೆಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಗೆ ತಳಹದಿ ಹಾಕಿದ ಮಹನೀಯರಲ್ಲೊಬ್ಬರು.  ಇಂಥವರ ಹೆಸರಲ್ಲಿ ಸ್ಥಾಪಿತವಾಗಿರುವ ಈ ಪ್ರಶಸ್ತಿ (ಇದೇ ಮೊದಲನೇ ಬಾರಿಯ ಪ್ರಶಸ್ತಿ) ಡಾ. ಬಿ. ರಾಜಶೇಖರಪ್ಪ ನವರಿಗೆ ಸಲ್ಲುತ್ತಿರುವುದು, ಚಿತ್ರದುರ್ಗದವರಿಗೆ ಹೆಮ್ಮೆ ಪಡುವ ಸಂಗತಿಯಾಗಿದೆ.

ಈ ಸಂದರ್ಭದಲ್ಲಿಕರ್ನಾಟಕಇತಿಹಾಸಅಕಾಡೆಮಿಯಅಧ್ಯಕ್ಷಡಾ. ದೇವರಕೊಂಡಾರೆಡ್ಡಿ, ಪರಿಷತ್ತಿನಡಾ. ಮಹಾದೇವಿ ಹಿರೇಮಠ, ಡಾ. ಬಿ.ವಿ. ಶಿರೂರ, ಪ್ರೊ. ಎಸ್.ಬಿ. ಹಿರೇಮಠ, ಡಾ. ಲಕ್ಷö್ಮಣ್‌ತೆಲಗಾವಿ ಮುಂತಾದವರು ಹಾಜರಿದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon