ದಾವಣಗೆರೆ : ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇಎಲ್.ಇಡಿ.ಗೆ ದಾಖಲಾತಿ ಪಡೆಯಲು ಜುಲೈ 31 ರವಗೆ ಆಫ್ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ. ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಪ್ರವೇಶ ಪಡೆಯಬಹುದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,( ಡಯಟ್), ದಾವಣಗೆರೆ ಇಲ್ಲಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ನಮೂನೆಗಳನ್ನು WWW.schooleducation.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಡಿ.ಡಿ.ಯೊಂದಿಗೆ ನೋಡಲ್ ಕೇಂದ್ರವಾದ ಡಯಟ್. ದಾವಣಗೆರೆ ಇಲ್ಲಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ಅರ್ಹತೆ. ಮೀಸಲಾತಿ ವಿವರಗಳು ಮತ್ತು ಇತರೆ ಮಾಹಿತಿಗಳನ್ನು WWW.schooleducation.karnataka.gov.in ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: ಕನ್ನಡ ಮಾಧ್ಯಮ – 9164489972, 988030377. 9844401092. 08192-231156, ಉರ್ದು ಮಾಧ್ಯಮ- 9164489972, 8867932439, 08192-231156 ಸಂಪರ್ಕಿಸಲು ಡಯಟ್ ಪ್ರಾಂಶುಪಾಲರಾದ ಗೀತಾ ತಿಳಿಸಿದ್ದಾರೆ.