ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ವರವು ಗ್ರಾಮದ ಡಿ.ಮಂಜುನಾಥ್ ತಂದೆ ದಾದಯ್ಯ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಮೈಕ್ರೋಬಯಲಾಜಿ ವಿಷಯದಲ್ಲಿ ಪಿಹೆಚ್‍ಡಿ ಪದವಿಗೆ ಅಂಗೀಕರಿಸಿದೆ.
ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ (ಮೈಕ್ರೋಬಯಲಾಜಿ) ವಿಭಾಗದ ಪ್ರಾಧ್ಯಾಪಕ ಡಾ.ಬಿ.ತಿಪ್ಪೇಸ್ವಾಮಿ ಇವರ ಮಾರ್ಗದರ್ಶನದಲ್ಲಿ ““ಬಯೋಪ್ರೊಸ್ಪೆಕ್ಟಿಂಗ್ ಎಂಡೋಪೆಟಿಕ್ ಫಂಗಿ ಫ್ರಮ್ ಮೆಡಿಸಿನಲ್ ಪ್ಲಾಂಟ್ಸ್ ಆಫ್ ಚಿತ್ರದುರ್ಗ ಜಿಲ್ಲೆ ಕರ್ನಾಟಕ” ( BIOPROSPECTING ENDOPHYTIC FUNGI FROM MEDICINAL PLANTS OF CHITRADURGA DISTRICT KARNATAKA) ಎಂಬ ವಿಷಯದ ಕುರಿತು ಡಿ.ಮಂಜುನಾಥ್ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾನಿಲಯ ಪಿಹೆಚ್‍ಡಿ ಪದವಿ ನೀಡಿದೆ.
ಮುಂಬರುವ ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಸೂಕ್ಷ್ಮ ಜೀವವಿಜ್ಞಾನದಲ್ಲಿ ಡಿ.ಮಂಜುನಾಥ್ ಪಿಹೆಚ್‍ಡಿ ಪದವಿ ಪ್ರಧಾನ ಮಾಡಲಾಗುವುದು.