ಬೆಂಗಳೂರು: ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ರಂಜಿನಿ ರಾಘವನ್. ಇದೀಗ ತನ್ನ ಕನಸಿನ ಹುಡುಗನನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.
ನಾಯಕಿಯಾಗಿಯಷ್ಟೇ ಅಲ್ಲದೇ ಕಥೆಗಾರ್ತಿಯಾಗಿರುವ ರಂಜನಿ ಕಥೆ ಡಬ್ಬಿಂಗ್ ಎಂಬ ಕಥಾಸಂಕಲನದ ರೂವಾರಿ ಕೂಡ ಹೌದು. ಇಂಥಾ ರಂಜನಿ ರಾಘವನ್ ಸದ್ಯ ತಮ್ಮ ಗೆಳೆಯ, ಮುಂದೆ ಮದುವೆಯಾಗಲಿರುವ ಹುಡುಗನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಖುಷಿ ಸಂದೇಶ ನೀಡಿದ್ದಾರೆ.
ಅಚ್ಚ ಕನ್ನಡತಿ ರಂಜನಿ ರಾಘವನ್ ಎಲ್ಲಿಯೂ ಅಪ್ಪಿ ತಪ್ಪಿ ತಮಗೆ ಹುಡಗನೊಬ್ಬನ ಮೇಲೆ ಪ್ರೀತಿಯಾಗಿದೆ ಎಂದು ಹೇಳಿರಲಿಲ್ಲ. ಹೀಗಾಗಿಯೇ ರಂಜಿನಿ ನೀಡಿದ ಈ ಸ್ವೀಟ್ ಸರ್ಫ್ರೈಸ್ ಆಶ್ಚರ್ಯಕರವಾಗಿತ್ತು. ಅಭಿಮಾನಿಗಳು ಸದ್ಯಕ್ಕೆ ರಂಜಿನಿ ರಾಘವನ್ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಆದಷ್ಟು ಬೇಗ ಮದುವೆಯ ಸಿಹಿ ಸುದ್ದಿಯನ್ನೂ ಕೂಡ ನೀಡಿ ಎಂಬ ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಮತ್ತೆ ರಂಜನಿ ಮದುವೆ ಅಪ್ಡೇಟ್ ಯಾವಾಗ ಕೊಡ್ತಾರೋ ಕಾದು ನೋಡಬೇಕಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
 
				 
         
         
         
															 
                     
                     
                     
                     
                    


































 
    
    
        