ಹೈದರಾಬಾದ್: ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದದಲ್ಲಿ ದನದ ಕೊಬ್ಬು, ಮೀನು ಎಣ್ಣೆ ಬಳಸಿರುವ ಅಂಶ ಬಯಲಾದ ನಂತರ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಪವಾಸ ವ್ರತ ಕೈಗೊಂಡಿದ್ದಾರೆ. ಈ ವಿಚಾರವಾಗಿ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಅವರು, ಈ ವಿಚಾರದಲ್ಲಿ ಹಿಂದಿನ ಮುಖ್ಯಮಂತ್ರಿಯನ್ನು ನಾನು ದೂಷಿಸಲಾರೆ. ನೇಮಿಸಲಾಗಿದ್ದ ಸಮಿತಿ ಮಾಡಿದ ಪ್ರಮಾದದಿಂದ ಈ ಅವಘಡ ಆಗಿದೆ. ಈ ವಿವಾದದಲ್ಲಿ ಪ್ರಧಾನ ಮಂತ್ರಿ ಮೋದಿಯನ್ನು ನಡುವೆ ತರಬೇಡಿ. ಯಾರಿಂದ ತಪ್ಪು ಆಗಿದೆಯೋ ಅವರಿಂದಲೇ ಸರಿಪಡಿಸುವ ಕೆಲಸ ಆಗಬೇಕು. ಮತ್ತು ಇದರಲ್ಲಿ ತಪ್ಪು ಮಾಡಿದವರನ್ನು ಸುಮ್ಮನೇ ಬಿಡಕೂಡದು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ