ತೆಲಂಗಾಣದಲ್ಲಿ ಕಾಂಗ್ರೆಸ್ ಜಯ ಭೇರಿ: ಕಾರ್ಯಕರ್ತರ ವಿಜಯೋತ್ಸವ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ತೆಲಂಗಾಣದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಭೇರಿ ಬಾರಿಸಿದ ಹಿನ್ನಲೆಯಲ್ಲಿ ಇಂದು ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂದೆ ಮಾಜಿ ಸಚಿವ ಅಂಜನೇಯ ರವರು ತಮಟೆಯನ್ನು ಬಾರಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರೆ, ಮಹಿಳಾ ಕಾರ್ಯಕರ್ತರು ನೃತ್ಯ ಮತ್ತು ಸಾರ್ವಜನಿಕರಿಗೆ ಸಿಹಿಯನ್ನು ಹಂಚುವುದರ ಮೂಲಕ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಆಂಜನೇಯ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯ ಭೇರಿ ಭಾರಿಸಿದೆ. ಬಿಜೆಪಿ ಪಕ್ಷಕ್ಕೆ ದಕ್ಷಿಣ ಭಾರತವನ್ನು ಹೆಬ್ಬಾಗಿಲು ಎನ್ನಲಾಗುತ್ತಿತು ಇದನ್ನು ಅಲ್ಲಿನ ಮತದಾರರು ಚುನಾವಣೆಯಲ್ಲಿ ಸುಳ್ಳು ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿ ಆಧಿಕಾರವನ್ನು ನೀಡಿದ್ದಾರೆ. ಇದಕ್ಕೆ ಅಲ್ಲಿನ ಮತದಾರರಿಗೆ ನಮ್ಮ ಪಕ್ಷ ಅಭಿನಂದಿಸುತ್ತದೆ. ಭ್ರಷ್ಠಾಚಾರ, ದರಗಳ ಏರಿಕೆ, ಹಿನ್ನಲೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಯನ್ನು ತಿರಸ್ಕಾರ ಮಾಡುವುದರ ಮೂಲಕ ಕಾಂಗ್ರೆಸ್ನ ಕೈ ಹಿಡಿದಿದ್ದಾರೆ ಎಂದರು.

ತೆಲಂಗಾಣದಲ್ಲಿ ನಡೆದ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮೋದಿಯವರಿಗೆ ಅಲ್ಲಿನ ಮತದಾರರು ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರವೇಶ ಇಲ್ಲ ಎಂಬ ಸಂದೇಶವನ್ನು ಚುನಾವಣೆಯ ಮೂಲಕ ನೀಡಿದ್ದಾರೆ. ದಕ್ಷಿಣ ಭಾರತದ ಬಾಗಿಲು ಬಂದ್ ಎಂದು ಬಿಜೆಪಿಯವರಿಗೆ ಸಂದೇಶವನ್ನು ರವಾನಿಸಿದ್ದಾರೆ. ಕಾಂಗೆÀ್ರಸ್ ತೆಲಗಾಣ ರಾಜ್ಯವನ್ನು ನಿರ್ಮಾಣ ಮಾಡಿತ್ತು ಇದರ ಪರಿಣಾಮವಾಗಿ ಅಲ್ಲಿನ ಮತದಾರರು ಕೈ ಹಿಡಿದಿದ್ದಾರೆ. ಕರ್ನಾಟಕದಲ್ಲಿ ನೀಡಿ ಗ್ಯಾರೆಂಟಿ ರೀತಿಯಲ್ಲಿ ಅಲ್ಲಿಯೂ ಸಹಾ ಹಲವಾರು ಗ್ಯಾರೆಂಟಿಗಳನ್ನು ನೀಡುವುದರ ಮೂಲಕ ಅಧಿಕಾರವನ್ನು ಹಿಡಿಯಲಾಗಿದೆ ಎಂದು ಆಂಜನೇಯ ತಿಳಿಸಿದರು.

ತೆಲಂಗಾಣದ ಮತದಾರರ ಅಸೆಗಳನ್ನು ಇಟ್ಟುಕೊಂಡು ಆಧಿಕಾರವನ್ನು ನೀಡಿದ್ಧಾರೂ ಅದನ್ನು ಅಲ್ಲಿನ ನೂತನ ಸಕಾರ ಈಡೇರಿಸಲಿದೆ. ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು ರಾಜ್ಯವನ್ನು ಅಭೀವೃದ್ದಿ ರಾಜ್ಯವನ್ನಾಗಿ ಮಾಡಲಾಗುವುದು ಎಂದ ಅವರು ಮಧ್ಯ ಪ್ರದೇಶದಲ್ಲಿಯೂ ಸಹಾ ಬಿಜೆಪಿಯವರು ಮತದಾರರಿಗೆ ಗ್ಯಾರೆಂಟಿಯನ್ನು ನೀಡುವುದರ ಮೂಲಕ ನಮ್ಮದನ್ನು ಕಾಪಿ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ರವರು ಗ್ಯಾರೆಂಟಿಗಳನ್ನು ನೀಡಿದಾಗ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯವರು ಮಧ್ಯ ಪ್ರದೇಶದಲ್ಲಿ ಯಾಕೆ ನಮ್ಮದ್ದನ್ನು ಕಾಪಿ ಮಾಡಿ ಗ್ಯಾರೆಂಟಿಗಳನ್ನು ನೀಡಿದ್ದಾರೆ ಈಗ ಮತಕ್ಕಾಗಿ ಬಿಜೆಪಿಯವರಿಗೆ ಈಗ ಬಡವರ ಬಗ್ಗೆ ಅನುಕಂಪ ಬಂದಿದೆ ಎಂದು ಟೀಕಿಸಿದರು.

ಬಿಜೆಪಿಯವರು ಮತಕ್ಕಾಗಿ ದ್ವಂದ ನೀತಿಯನ್ನು ಅನುಸರಿಸುತ್ತಿದ್ದಾರೆ. ಮತದಾರರನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದಾರೆ, ನಿಮ್ಮ ನೀತಿ ಒಂದು ರೀತಿಯಲ್ಲಿ ಇರಬೇಕಿದೆ ಗ್ಯಾರೆಂಟಿಗಳನ್ನು ನೀಡಿದರು ಸಹಾ ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ, ಬಡವರಿಗಾಗಿ ಹಲವಾರು ಯೋಜನೆಯನ್ನು ನೀಡಲಾಗಿದೆ. ಈಗ ಬಂದಿರುವ ಬರಗಾಲವನ್ನು ಸಹಾ ಎದುರಿಸಲಾಗುವುದು, ಅದಕ್ಕೆ ಬೇಕಾದ ಸಿದ್ದತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ್ದಾರೆ. ವಾಮಮಾರ್ಗಗಳನ್ನು ಅನುಸರಿಸುವುದರಲ್ಲಿ ಬಿಜೆಪಿ ನಿಸ್ಸಿಮರಾಗಿದ್ದಾರೆ ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಹಿಂದೆ ಮಧ್ಯ ಪ್ರದೇಶದಲ್ಲಿ ನಡೆದ ಘಟನೆಗಳು ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಕುಳಿತು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿಯಲು ಹಲವಾರು ತಂತ್ರಗಳನ್ನು ಹೆಣೆಯುವುದರಲ್ಲಿ ಬಿಜೆಪಿಯವರು ಮುಂದೆ ಇದ್ದಾರೆ ಎಂದು ಬಿಜೆಪಿಯವರ ಕುತಂತ್ರವನ್ನು ಅಂಜನೇಯ ಖಂಡಿಸಿದರು.

ರಾಜಸ್ಥಾನದಲ್ಲಿ ಈ ಭಾರಿ ನಮ್ಮ ಪಕ್ಷ ಅಧಿಕಾರವನ್ನು ಹಿಡಿಯಲು ಆಗಿಲ್ಲ ಆಲ್ಲಿನ ಮತದಾರರು ಒಂದೊಂದು ಬಾರಿ ಒಂದೊಂದು ಪಕ್ಷವನ್ನು ಗೆಲ್ಲಿಸುತ್ತಾರೆ ಈ ಬಾರಿ ಬೇರೆ ಪಕ್ಷವನ್ನು ಗೆಲ್ಲಿಸಿದ್ದಾರೆ ಮುಂದಿನ ಲೋಕಸಬಾ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಮ್ಮ ಕರ್ನಾಟಕ ರಾಜ್ಯದ ಹಲವಾರು ಮುಖಂಡರು ಕಾರಣರಾಗಿದ್ದಾರೆ ನಮ್ಮ ನಾಯಕರು ಅಲ್ಲಿಗೆ ಹೋಗಿ ಮತಯಾಚನೆ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಿದ್ದರಿಂದ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.

ಜಿಲ್ಲಾ ಡಿಸಿಸಿ ಅಧ್ಯಕ್ಷರಾದ ತಾಜ್ಪೀರ್, ಎನ್.ಡಿ.ಕುಮಾರ್, ಅಂಜನಪ್ಪ ಸೇರಿದಂತೆ ಕಾಂಗ್ರೆಸ್ನ ವಿವಿಧ ಘಟಕಗಳ ಅಧ್ಯಕ್ಷರ ಕಾರ್ಯಕರ್ತರು ಈ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನಾ ಕಾಂಗ್ರೆಸ್ ಕಚೇರಿ ಮುಂದೆ ಟ್ಯಾಸ್ಟೋ ಸದ್ದಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆಯನ್ನು ಹಾಕುವುದರ ಮೂಲಕ ತೆಲಂಗಾಣದ ವಿಜಯವನ್ನು ಆಚರಣೆ ಮಾಡಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon