ಆದಿಲಾಬಾದ್: ತೆಲಂಗಾಣದಲ್ಲಿ ಚುನಾವಣಾ ಕಾವು ರಂಗೇರಿದೆ. ಎಲ್ಲ ಪಕ್ಷಗಳ ರಾಜಕೀಯ ನಾಯಕರು ತೆಲಂಗಾಣ ರಾಜ್ಯದಲ್ಲಿ ಸುತ್ತಾಡಿ ಮತಯಾಚನೆ ನಡೆಸಿದ್ದಾರೆ. ಅದರಂತೆ ಆದಿಲಾಬಾದ್ನಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡು ಕೆ. ಚಂದ್ರಶೇಖರ ರಾವ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ಅವರು ಮುಂದಿನ ಸಲ ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಹೊಂದಿದ್ದಾರೆ. ಈಗ ಅವರಿಗೆ ಇರುವ ಗುರಿ ಇದೊಂದೇ. ಆದರೆ ನಮ್ಮ ಉದ್ದೇಶ ತೆಲಂಗಾಣ ಬುಡಕಟ್ಟು ಸಮುದಾಯಗಳನ್ನು ಮುಂಚೂಣಿಗೆ ತರುವುದು. ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ, ರೈತರ ಜಮೀನಿನಲ್ಲಿ ನೀರು ಹರಿಸೋದಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

































