Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ತೆಳ್ಳಗೆ, ಬೆಳ್ಳಗೆ ಇರೋ ಬ್ಯೂಟಿಗೆ ಮದ್ವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕಂತೆ!

0

ಹಿಂದೆಲ್ಲಾ ಮನೆಯವರು ನೋಡಿದವರ ಜೊತೆ ಹುಡುಗ-ಹುಡುಗಿಗೆ ಮದುವೆ ನಡೆದು ಹೋಗುತ್ತಿತ್ತು. ಆದ್ರೆ ಈಗ ಎಲ್ಲಾ ಯುವಕ, ಯುವತಿಯರು ತಮ್ಮ ಸಂಗಾತಿ ಹೀಗೆಯೇ ಇರಬೇಕೆಂಬ ಕನಸನ್ನು ಹೊಂದಿರುತ್ತಾರೆ. ತೆಳ್ಳಗೆ, ಬೆಳ್ಳಗೆ, ಸುಂದರ ಮತ್ತು ಫಿಟ್ ಆಗಿರಬೇಕ ಬಯಕೆ ಹೆಚ್ಚಿನವರಿಗಿರುತ್ತದೆ. ಹುಡುಗಿಯರಾದರೆ ಹುಡುಗನಿಗೆ ಸಿಕ್ಸ್ ಪ್ಯಾಕ್ ಇರಬೇಕು, ಹೈಟ್ ಇರಬೇಕು ಎಂಬ ಡಿಮ್ಯಾಂಡ್ ಮುಂದಿಟ್ಟರೆ, ಕೆಲ ಹುಡುಗರು, ಹುಡುಗಿ ಸ್ಲಿಮ್ ಇರಬೇಕು, ಹೇರ್ಸ್‌ ಚೆನ್ನಾಗಿರಬೇಕು ಎಂದು ಬೇಡಿಕೆಯಿಡುತ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಮಾತ್ರ ಇದೆಲ್ಲಕ್ಕಿಂತ ವಿಭಿನ್ನವಾಗಿ ನಂಗೆ ಮದುವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕು ಅಂತಿದ್ದಾಳೆ. ಹೌದು, ಕೇಳೋಕೆ ವಿಚಿತ್ರ ಅನಿಸಿದರೂ ಇದು ನಿಜ. ಬಳಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ. ಕಜಕಿಸ್ತಾನ್‌ ಮೂಲದವಳಾದ ಹಸೀನಾ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಈಕೆ ತಾನು ಮದುವೆಯಾಗೋದು ದೊಡ್ಡ ಹೊಟ್ಟೆಯ ಹುಡುಗನನ್ನೇ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ. ಕಜಕಿಸ್ತಾನದ ಈ ಸುಂದರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆ ಒಪ್ಪಿದರೆ ಮದುವೆಯಾಗಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ, ಈ ಚೆಲುವೆ ನಿಜವಾದ ಪ್ರೇಮ ಸಂಗಾತಿಯನ್ನು ಹುಡುಕುತ್ತಿದ್ದಾಳೆ. ಅವಳು ಫಿಟ್ ಮತ್ತು ಒರಟಾದ ನೋಟವನ್ನು ಹೊಂದಿರುವ ಮನುಷ್ಯನನ್ನು ಬಯಸುವುದಿಲ್ಲ, ಬದಲಿಗೆ ದಪ್ಪ ಹೊಟ್ಟೆಯ ಗಂಡನನ್ನು ಹುಡುಕುತ್ತಿದ್ದಾಳೆ. ಇದನ್ನು ತಿಳಿದರೆ ನೀವು ಶಾಕ್ ಆಗಬಹುದು ಆದರೆ ಇದು ಸತ್ಯ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ವಿಭಿನ್ನ ದೇಹ ಆಕಾರವಿದೆ. ಕೆಲವರು ಸ್ಥೂಲಕಾಯರು ಮತ್ತು ಕೆಲವರು ತೆಳ್ಳಗಿರುತ್ತಾರೆ. ಕೆಲವರು ಕುಳ್ಳಗಿದ್ದರೆ, ಕೆಲವರು ಎತ್ತರವಾಗಿರುತ್ತಾರೆ. ಇತ್ತೀಚೆಗಂತೂ ವರ ಕಪ್ಪಗಿದ್ದಾನೆ, ಕುಳ್ಳಗಿದ್ದಾನೆ ಎಂಬ ಕಾರಣಕ್ಕೆ ಮದುವೆ ನಿಲ್ಲಿಸಿದ ಪ್ರಕರಣಗಳನ್ನು ಕೇಳಿದ್ದೇವೆ. ಹೀಗಿರುವಾಗ ಹಸೀನಾಳ ವಿಚಿತ್ರ ಡಿಮ್ಯಾಂಡ್ ಎಲ್ಲರ ಹುಬ್ಬೇರುವಂತೆ ಮಾಡಿದೆ.

Leave A Reply

Your email address will not be published.