ಚಿತ್ರದುರ್ಗ: ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಶರಣಬಸಪ್ಪ ಭೋಗಿ ಅವರನ್ನು ಕರ್ತವ್ಯ ಲೋಪ ಹಾಗೂ ಕಚೇರಿ ಸಿಬ್ಬಂದಿ ದುರ್ಬಳಕೆ ಆರೋಪದಡಿ ಅಮಾನುತ್ತುಗೊಳಿಸಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ರೂಪಾ ಆದೇಶಿಸಿದ್ದಾರೆ.
ಕಲಬುರುಗಿ ಜಿಲ್ಲೆಯಲ್ಲಿ ಇಲಾಖೆ ಅಧಿಕಾರಿಯಾಗಿದ್ದ ವೇಳೆ ರಾಘವೇಂದ್ರ ಎಂಬಾತ ವ್ಯಕ್ತಿ ವಿರುದ್ಧ ಸುಳ್ಳು ದೂರು ದಾಖಲಿಸಿ, ಜತೆಗೆ ನೌಕರರನ್ನು ಈ ಸಂಬಂಧ ದುರ್ಬಳಕೆ ಮಾಡಿಕೊಂಡಿರುವ ಆರೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.


































