ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಥಟ್ಟಂತ ಆಗುವ ರೆಸಿಪಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವಂತಹ ಎಗ್ ಬ್ರೆಡ್ ಟೋಸ್ಟ್ ಇದೆ.
ಇದು ಬೇಗ ಆಗುವುದಲ್ಲದೇ ಹೊಟ್ಟೆಯೂ ತುಂಬುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಸ್ಲೈಸ್ ಬ್ರೆಡ್, 1 ಮೊಟ್ಟೆ, 1 ಸಣ್ಣ – ಈರುಳ್ಳಿ, 1 – ಸಣ್ಣ ಟೊಮೆಟೊ, 2 – ಹಸಿಮೆಣಸು, ಚೀಸ್ – 2 ಸ್ಲೈಸ್, ಉಪ್ಪು – ರುಚಿಗೆ ತಕ್ಕಷ್ಟು, ಚಿಟಿಕೆ – ಅರಿಶಿನ, 1 ಟೇಬಲ್ ಸ್ಪೂನ್ – ಕೊತ್ತಂಬರಿ ಸೊಪ್ಪು, 2 ಟೀ ಸ್ಪೂನ್ – ಬೆಣ್ಣೆ.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಉಪ್ಪು, ಅರಿಶಿನ, ಈರುಳ್ಳಿ, ಟೊಮೆಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಚಿಕ್ಕದ್ದಾಗಿ ಕತ್ತರಿಸಿ ಹಾಕಿಕೊಳ್ಳಿ. ನಂತರ ಇದಕ್ಕೆ ಮೊಟ್ಟೆ ಒಡೆದು ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಬ್ರೆಡ್ ಸ್ಲೈಸ್ ಅನ್ನು ಮೊಟ್ಟೆಯಲ್ಲಿ ಅದ್ದಿ ಪ್ಯಾನ್ ಮೇಲೆ ಎರಡೂ ಕಡೆ ಫ್ರೈ ಮಾಡಿಕೊಂಡು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಉಳಿದ ಮೊಟ್ಟೆಯ ಮಿಶ್ರಣವನ್ನು ಪ್ಯಾನ್ ಗೆ ಹಾಕಿ ಇದು ತುಸು ಬೆಂದು ಬರುತ್ತಿದ್ದಂತೆ ಇದನ್ನು ಎರಡು ಭಾಗ ಮಾಡಿಕೊಂಡು ಇದರ ಮೇಲೆ ಒಂದೊಂದು ಚೀಸ್ ಸ್ಲೈಸ್ ಇಟ್ಟು ಹಾಗೇ ಬ್ರೆಡ್ ಸ್ಲೈಸ್ ಕೂಡ ಇಡಿ. ನಂತರ ತಿರುವಿ ಹಾಕಿ . ಪೂರ್ತಿ ಬೆಂದ ಮೇಲೆ ಗ್ಯಾಸ್ ಅಫ್ ಮಾಡಿ.