ಕಳೆದ ಕೆಲ ವರ್ಷಗಳಿಂದ ಡೇಟಿಂಗ್ನಲ್ಲಿದ್ದ ತಮಿಳು ನಟ ಅಶೋಕ್ ಸೆಲ್ವನ್ ಹಾಗೂ ನಟಿ ಕೀರ್ತಿ ಪಾಂಡಿಯನ್ ಅವರು ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಟುಂಬದವರ ಸಮ್ಮುಖದಲ್ಲಿ ತಿರುನೆಲ್ವೇಲಿ ಸಮೀಪದ ಇಟ್ಟೇರಿಯಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಈ ಜೋಡಿ ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೂತನ ದಂಪತಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
ಕಳೆದ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಕೀರ್ತಿ-ಅಶೋಕ್ ಲೈಟ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.
ಇದೇ 16ರಂದು ಚಿತ್ರರಂಗದ ಗಣ್ಯರಿಗೆ, ಆಪ್ತರಿಗಾಗಿ ಚೆನ್ನೈನಲ್ಲಿ ಅಶೋಕ್ ಸೆಲ್ವನ್ ದಂಪತಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಶೋಕ್ ಸೆಲ್ವನ್ 2013ರಲ್ಲಿ ‘ಸೂಧುಕುವ್ವಂ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ ಅಶೋಕ್, ಕಳೆದ ವರ್ಷ ಸಾಲು ಸಾಲು 7 ಸಿನಿಮಾಗಳು ಬಿಡುಗಡೆಯಾಗಿದೆ.