ಪಾನಿಪೂರಿ ಸೇವನೆ ಮಾಡಿ 19 ಮಕ್ಕಳು ಅಸ್ವಸ್ತರಾದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಚಿನ್ನೂರಿನಲ್ಲಿ ನಡೆದಿದೆ.
ಮಲೇಚೆನ್ನೂರಿನ ಜಾಮಿಯಾ ಮಸೀದಿ ಬಳಿ ಉಪವಾಸ ಮುಗಿಸಿದ ಬಳಿಕ ಮಸೀದಿ ಮುಂಭಾಗದಲ್ಲಿ ಪಾನೀಪೂರಿ ಸೇವಿಸಿದ 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿಚಿಂತಾಜನಕವಾಗಿದೆ. ಸದ್ಯ ಅವರನ್ನು ದಾವಣಗೆರೆ
ಬಾಪೂಜಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

































