ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಅಂಗನವಾಡಿ, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜುಲೈ 15ರಂದು ರಜೆ ಘೋಷಿಸಲಾಗಿದೆ.
ಮಡಿಕೇರಿ ನಗರದಲ್ಲಿ ಗಾಳಿಯ ವೇಗ ಭಾನುವಾರ ರಾತ್ರಿ ತೀವ್ರಗತಿಯನ್ನು ಪಡೆದುಕೊಂಡಿದೆ. ತೀವ್ರಗತಿಯಲ್ಲಿ ಬೀಸುತ್ತಿರುವ ಗಾಳಿ, ಹಲವೆಡೆ ಮರಗಳು ಧರೆಗೆ ಉರುಳಿಬಿದ್ದಿವೆ. ಭಾರಿ ಮಳೆಯ ಜೊತೆಗೆ ಬೀಸುತ್ತಿರುವ ಜೋರುಗಾಳಿಯು ಹಲವೆಡೆ ಮರಗಳನ್ನು ಧರೆಗುರುಳಿಸಿದೆ. ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ. ಹಾಗಾಗಿ ಇಂದು ಶಾಲಾ-ಕಾಲೇಜಿಗೆ ರಜೆನೀಡಲಾಗಿದೆ.


































